Mysore
24
clear sky

Social Media

ಸೋಮವಾರ, 06 ಜನವರಿ 2025
Light
Dark

ಎಂ.ಬಿ.ಅನಂತಸ್ವಾಮಿ ಸಾಂಸ್ಕೃತಿಕ ಸೇವಾ ಟ್ರಸ್ಟ್‌ನ ಪ್ರಥಮ ವಾರ್ಷಿಕೋತ್ಸವ ನಾಳೆ

ಮೈಸೂರು: ನಗರದ ಎಂ.ಬಿ.ಅನಂತಸ್ವಾಮಿ ಸಾಂಸ್ಕೃತಿಕ ಮತ್ತು ಸೇವಾ ಟ್ರಸ್ಟ್‌ನ ಪ್ರಥಮ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಡಿ.೧೨ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಚಂದ್ರು ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇರ್ವಿನ್ ರಸ್ತೆಯ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಂದು ಸಂಜೆ ೪.೩೦ಕ್ಕೆ ನಡೆಯುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಸಕರಾದ ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಡಾ.ಅರ್ಪಿತಾ ಸಿಂಹ, ಮಹಾಪೌರ ಶಿವಕುಮಾರ್, ನಗರಪಾಲಿಕೆ ಸದಸ್ಯ ಎಂ.ಡಿ.ಆಗರಾಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಾಟಕ ನಿರ್ದೇಶಕ ರಾಜಪ್ಪ, ವಯೋಲಿನ್ ಕಲಾವಿದರಾದ ಎಚ್.ಕೆ.ನರಸಿಂಹ ಮೂರ್ತಿ, ಎಚ್.ಎಸ್.ತಾಂಡವಮೂರ್ತಿ, ಡೋಲು ವಿದ್ವಾನ್ ಎಸ್.ಪುಟ್ಟರಾಜು, ವೀಣಾ ವಾದಕಿ ಎಸ್.ರಾಜಲಕ್ಷ್ಮೀ, ಮೃದಂಗ ವಿದ್ವಾನ್ ವಿ.ಆರ್.ರಾಜಗೋಪಾಲ್, ಪಿಟೀಲು ವಾದಕ ಡಿ.ನಾರಾಯಣ, ಕ್ಲಾರಿಯೋ ನೆಟ್ ವಾದಕ ಡಾ.ಸಿ.ಪಿ.ಕೃಷ್ಣಮೂರ್ತಿ ಅವರುಗಳನ್ನು ಸನ್ಮಾನಿಸಲಾಗುವುದು.

ಬಳಿಕ ಆಕಾಶವಾಣಿ ಕಲಾವಿದರಾದ ಎಂ.ಎ.ಕೃಷ್ಣಮೂರ್ತಿ ಮತ್ತು ಜಯಲಕ್ಷ್ಮೀ ಕುಟುಂಬ ವರ್ಗದ ಎಂ.ಕೆ.ವಾಸವಿ ಹಾಗೂ ಕೆ.ಎಂ.ಅರ್ಪಿತ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ತಿ.ನರಸೀಪುರ ತಾಲ್ಲೂಕು ಕಿರಗಸೂರು ಗ್ರಾಮದ ನಾಟಕ ನಿರ್ದೇಶಕ ರಾಜಪ್ಪ ಮತ್ತು ವೃಂದದವರು ರಂಗಗೀತೆ ಪ್ರಸ್ತುತ ಪಡಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಟ್ರಸ್ಟ್‌ನ ಅಧ್ಯಕ್ಷ ಎ.ಕಾಂತರಾಜು, ಖಜಾಂಚಿ ಬಿ.ಆರ್.ಜ್ಯೋತಿ, ನಿರ್ದೇಶಕರುಗಳಾದ ಕೆ.ಮಂಜುನಾಥ್, ಎ.ಸುಗುಣ ಕಾಂತರಾಜು, ಎಂ.ಎಸ್.ಲಕ್ಷ್ಮೀಕಾಂತ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ