Mysore
19
broken clouds

Social Media

ಬುಧವಾರ, 18 ಫೆಬ್ರವರಿ 2026
Light
Dark

ದೀಪದ ಬೆಳಕಿನಲ್ಲಿ ದಸರಾ ಆನೆಗಳ ದರ್ಬಾರ್

ಗಜಪಡೆಗೆ ದೀಪಾಲಂಕಾರದಲ್ಲಿ ಹೆಜ್ಜೆ ಹಾಕಲು ತಾಲೀಮು

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ಜಂಬೂ ಸವಾರಿಗೆ ಸಂಜೆ ೫.೪೦ಕ್ಕೆ ಚಾಲನೆ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೀಪಾಲಂಕಾರದಲ್ಲಿ ಗಜಪಡೆಗಳು ಹೆಜ್ಜೆ ಹಾಕಲು ಶುಕ್ರವಾರದಿಂದ ತರಬೇತಿ ಆರಂಭವಾಗಿದೆ. ಆನೆಗಳಿಗೆ ತರಬೇತಿ ನೀಡುವ ಸಲುವಾಗಿೆುೀಂ ಜಂಬೂ ಸವಾರಿ ಹೊರಡುವ ಮಾರ್ಗದಲ್ಲಿ ನವರಾತ್ರಿಗೆ ಮೂರು ದಿನ ಮುನ್ನವೇ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ ರಾತ್ರಿ ದೀಪದ ಬೆಳಕಿಗೂ ಜಗ್ಗದೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ರಾಜಮಾರ್ಗದಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಿದವು. ಗೋಪಾಲಸ್ವಾಮಿ ಆನೆಗೆ ಮರದ ಅಂಬಾರಿಯನ್ನು ಹೊರಿಸಲಾಗಿತ್ತು.
ಈ ಬಾರಿ ಅಂಬಾರಿಗೆ ಅ.೫ರಂದು ಸಂಜೆ ೫.೪೦ಕ್ಕೆ ಪುಷ್ಪಾರ್ಚನೆಗೆ ಸಮಯ ನಿಗದಿಪಡಿಸಿದ ಕಾರಣ ಜಂಬೂ ಸವಾರಿ ಬನ್ನಿಮಂಟಪ ತಲುಪಲು ರಾತ್ರಿಯಾಗಲಿದೆ. ಮೆರವಣಿಗೆ ದೀಪಾಲಂಕಾರದ ನಡುವೆ ಸಾಗುವ ಅನಿವಾರ್ಯತೆ ಇರುವ ಕಾರಣದಿಂದ ಗಜಪಡೆ ಅದಕ್ಕೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಅರಣ್ಯ ಇಲಾಖೆ ನವರಾತ್ರಿ ಆರಂಭವಾಗುವ ಮೂರು ದಿನ ಮೊದಲೇ ದೀಪಾಲಂಕಾರದ ವ್ಯಸ್ಥೆ ಮಾಡುವಂತೆ ಕೋರಿತ್ತು.
ಅರಣ್ಯ ಇಲಾಖೆಯ ಮನವಿಗೆ ಸ್ಪಂದಿಸಿದ ಸೆಸ್ಕ್ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಅರಮನೆ ದ್ವಾರದಿಂದ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಆರ್‌ಎಂಸಿ ವೃತ್ತ ಜಂಬೂ ಬಜಾರ್, ಹೈವೇ ವೃತ್ತದ ಮೂಲಕ ಬನ್ನಿ ಮಂಟಪದ ಕವಾಯತು ಮೈದಾನದವರೆಗೆ ಐದು ಕಿಮೀ ರಸ್ತೆಗೆ ಶುಕ್ರವಾರ ಸಂಜೆಯಿಂದಲೇ ದೀಪಾಲಂಕಾರ ಮಾಡಲಾಗಿತ್ತು. ಸಂಜೆ ೭ ಗಂಟೆಗೆ ದೀಪ ಝಗಮಗಿಸಿದ್ದು, ಈ ಬೆಳಕಿನಲ್ಲಿ ಗಜಪಡೆಗಳು ತಾಲೀಮು ನಡೆಸಿದವು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!