ಹನೂರು: ಕಳ್ಳಬಟ್ಟಿ ತಯಾರಿಸಲು ಶೇಖರಣೆ ಮಾಡಿದ್ 18 ಲೀಟರ್ ಕಳ್ಳಬಟ್ಟಿ ಕೊಳೆಯನ್ನು ರಾಮಾಪುರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ತಾಲ್ಲೂಕಿನ ದಿನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೆಮರದದೊಡ್ಡಿ ಗ್ರಾಮದ ಸರಸಿ ಬಾಯಿ ಆರೋಪಿಯಾಗಿದ್ದಾರೆ.
ಘಟನೆ ವಿವರ: ಕಳ್ಳಬಟ್ಟಿ ತಯಾರಿಸಲು 2 ಬಿಂದಿಗೆ ಹಾಗೂ ಸ್ಟೀಲ್ ಗುಂಡಿಯಲ್ಲಿ 18 ಲೀಟರ್ ಕಳ್ಳಬಟ್ಟಿ ಕೊಳೆಯನ್ನು ಸಂಗ್ರಹಿಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ನಂಜುಂಡಸ್ವಾಮಿ ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ಮಾಲು ಸಮೇತ ಬಂಧಿಸಿ,ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.
ದಾಳಿಯಲ್ಲಿ ಮುಖ್ಯ ಪೇದೆಗಳಾದ ನಾಗೆಂದ್ರ, ನಾಗಶೆಟ್ಟಿ, ಪೇದೆ ಮಹೇಂದ್ರ ಮಹಿಳಾ ಪೇದೆ ಇಂದ್ರಾಣಿ ರವರು ಪಾಲ್ಗೊಂಡಿದ್ದರು..





