Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕ್ಲಬ್‌ಗಳು ಮನರಂಜನೆ ಜತೆಗೆ ಸೇವಾ ಕಾರ್ಯ ಕೈಗೊಳ್ಳಲಿ : ಸಾ.ರಾ.ಮಹೇಶ್ ಸಲಹೆ

ಕೆ.ಆರ್.ನಗರದಲ್ಲಿ ಸುರಕ್ಷ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಉದ್ಘಾಟಿಸಿದ ಶಾಸಕ ಸಾ.ರಾ.ಮಹೇಶ್ ಸಲಹೆ

ಕೆ.ಆರ್.ನಗರ: ರಿಕ್ರಿಯೇಷನ್ ಕ್ಲಬ್‌ಗಳು ಮನರಂಜನಾ ಕೂಟದ ಜೊತೆಗೆ ಆರೋಗ್ಯ ಶಿಬಿರ ಹಾಗೂ ಸವಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಸೇವೆ ಮಾಡಬೇಕು ಎಂದು ಶಾಸಕ ಸಾ.ರಾ.ಮಹೇಶ್ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಸುರಕ್ಷ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಉದ್ಘಾಟಿಸಿ ವಾತನಾಡಿದ ಅವರು, ಕಾರ್ಡ್ಸ್ ಆಟ ಮನರಂಜನೆಗಾಗಿ ವಾತ್ರ ಸೀಮಿತವಾಗಿರಲಿ. ಅದು ಜೂಜಾಟವಾಗ ಬಾರದು, ಸಂತೋಷ ಕೂಟವಾಗಿರ ಬೇಕು. ಇದರ ಜೊತೆಗೆ ಕ್ರಿಕೆಟ್, ವಾಲಿಬಾಲ್, ಟೆನ್ನಿಸ್ ಸೇರಿದಂತೆ ಕ್ರೀಡಾ ಕೂಟಗಳನ್ನು ನಡೆಸಿ ಎಂದು ಸಲಹೆ ನೀಡಿದರು.

ಸಿ.ಎ. ನಿವೇಶನ ಕೇಳಿದ್ದೀರಿ. ಆದರೆ ಅಧ್ಯಕ್ಷರು ಸೇರಿದಂತೆ ನಿರ್ದೇಶಕರು, ಸದಸ್ಯರು ಆರ್ಥಿಕವಾಗಿ ಚೆನ್ನಾಗಿದ್ದೀರಿ. ಆದ್ದರಿಂದ ಎರಡು ಎಕರೆ ಭೂಮಿ ಖರೀದಿಸಿ ದೊಡ್ಡದಾಗಿ ಕ್ಲಬ್ ನಿರ್ಮಾಣ ಮಾಡಿ, ಸದಸ್ಯರು ಕುಟುಂಬ ಸಮೇತ ಬಂದು ಕಾಲ ಕಳೆಯುವಂತೆ ಆಗಲಿ ಎಂದು ಹೇಳಿದರು.

ರಾಜಶೇಖರ ಕೋಟಿ ಅವರನ್ನು ಹೊಗಳಿದ ಶಾಸಕ : ಇದೇ ಸಂದರ್ಭದಲ್ಲಿ ಮೈಸೂರಿನ ಪ್ರತಿಷ್ಠಿತ ಕ್ಲಬ್ ಎಂದು ಪ್ರಖ್ಯಾತಿ ಪಡೆದಿದ್ದ ಸಿ.ಸಿ.ಕ್ಲಬ್ ಗೆ ನಾನು ಸದಸ್ಯನಾಗಿದ್ದೆ. ಅಂದಿನ ಅಧ್ಯಕ್ಷರಾಗಿದ್ದ ದಿ.ರಾಜಶೇಖರ ಕೋಟಿ ಅವರು ನಾನು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ನಮ್ಮ ಕ್ಲಬ್ ಸದಸ್ಯರು. ಮನೆಯ ಮಗನಂತೆ ಕರೆದು ಅಭಿನಂದನೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.

ನಂತರ ಸುರಕ್ಷ ಸ್ಪೋರ್ಟ್ಸ್ ಮತ್ತು ರಿಕ್ರೀಯೇಷನ್ ಕ್ಲಬ್ ನ ಅಧ್ಯಕ್ಷ ಶ್ರೀರಾಂಪರ ಸಂತೋಷ್ ಮಾತನಾಡಿ, ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಗುತ್ತಿಗೆದಾರನಾಗಿ ಕಾಮಗಾರಿ ಮಾಡಿದ್ದೇನೆ. ಆದರೆ ಶಾಸಕರು ಕಮೀಷನ್ ಕೇಳುತ್ತಾರೆ. ಆದರೆ ನಮ್ಮ ಶಾಸಕರಾದ ಸಾ.ರಾ.ಮಹೇಶ್ ಅಣ್ಣ ಒಂದೇ ಒಂದು ಪೈಸಾ ಕೂಡ ಕಾಮಗಾರಿಗೆ ಮತ್ತು ವರ್ಗಾವಣೆಗೆ ಹಣ ಕೇಳಿಲ್ಲ ಎಂದು ತಿಳಿಸಿದರು.

ಸುರಕ್ಷ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಇಂದೊಂದು ಕುಟುಂಬ ಸಮೇತ ಬಂದು ಕಾಲಕಳೆಯುವ ಮನರಂಜನಾ ಕ್ಲಬ್ ಆಗಲಿದೆ. ಜೊತೆಗೆ ಪ್ರತಿಷ್ಠಿತ ಕ್ಲಬ್ ಮಾಡಲು ಸದಸ್ಯರೆಲ್ಲರೂ ಸಹಕಾರ ನೀಡ ಬೇಕು ಎಂದು ಕೋರಿದರು.

ಮುಂದಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೊಡ್ಡದಾಗಿ ಕ್ಲಬ್ ನಿರ್ಮಾಣ ಮಾಡುವ ಗುರಿ ಹೊಂದಿದ್ದು ಶಾಸಕರಾದ ಸಾ.ರಾ.ಮಹೇಶ್ ಅವರ ಕೈಯಿಂದಲೇ ಉದ್ಘಾಟನೆ ಆಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ.ಸಾ.ರಾ.ಮಹೇಶ್ ಹಾಗೂ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಅವರನ್ನು ಅಭಿನಂದಿಸಲಾಯಿತು.

ಜಿ.ಪಂ.ವಾಜಿ ಸದಸ್ಯ ಎಂ.ಟಿ.ಕುಮಾರ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಕ್ಲಬ್ ನ ಉಪಾಧ್ಯಕ್ಷ ಮಿರ್ಲೆ ಹರೀಶ್(ಬಾರ್), ಕಾರ್ಯ ದರ್ಶಿ ಕೆ.ಆರ್.ಕೃಷ್ಣಮೂರ್ತಿ, ಸಹಕಾರ್ಯದರ್ಶಿ ಗಡ್ಡಮಹೇಶ್, ನಿರ್ಧೇಶಕರಾದ ದೊಡ್ಡಕೊಪ್ಪಲು ಕಾಂತರಾಜ್, ಎಸ್.ಟಿ.ಕೀರ್ತೀ, ಜಿ.ಆರ್.ಮಹೇಶ್,ಹೆಬ್ಬಾಳು ಮನುಗೌಡ, ಹೆಚ್.ಎಸ್.ಶಂಕರ್, ಅಂಕನಹಳ್ಳಿ ಅಭಿಲಾಷ್, ಸಿ.ಎನ್. ಮಂಜುನಾಥ್, ಡಿ.ಕಾಂತರಾಜ್, ವಕೀಲ ತಿಮ್ಮಪ್ಪ, ತಾ. ಜೆಡಿಎಸ್ ಮಾಜಿ ಅಧ್ಯಕ್ಷ ಹೆಬ್ಬಾಳು ಸುಜಯ್‌, ಶಿಕ್ಷಕ ಕುಚೇಲ, ವಾರಗೌಡನಹಳ್ಳಿ ತಮ್ಮಣ್ಣ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಜಾ.ದಳ ಮುಖಂಡರಾದ ಅನೀಫ್ ಗೌಡ, ಹಂಪಾಪುರ ಸೂರಿ, ಗ್ರಾ.ಪಂ.ಸದಸ್ಯ ಬಾಲಾಜಿಗಣೇಶ್, ಶಿಕ್ಷಕ ಕಲ್ಯಾಣಪುರ ರಾಜಶೇಖರ್ ಮೊದಲಾದವರು ಹಾಜರಿದ್ದರು.

ಪಟ್ಟಣದಲ್ಲಿ ಈಗಾಗಲೇ ಮೂರು ಕ್ಲಬ್ ಗಳು ನಡೆಯುತ್ತಿವೆ. ನಾನು ಕೂಡ ಆ ಮೂರು ಕ್ಲಬ್‌ಗಳಿಗೆ ಸದಸ್ಯ, ಇನ್ನು ಮುಂದೆ ನಿಮ್ಮ ಕ್ಲಬ್ ಸದಸ್ಯನಾಗುತ್ತೇನೆ. -ಸಾ.ರಾ.ಮಹೇಶ್ ಶಾಸಕ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ