Mysore
22
haze

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಚಿರತೆ ದಾಳಿಗೆ ಹಸು ಬಲಿ ಗ್ರಾಮಸ್ಥರಲ್ಲಿ ಆತಂಕ 

ಹನೂರು: ಚಿರತೆ ದಾಳಿಗೆ ಹಸು ಒಂದು ಬಲಿಯಾಗಿರುವ ಘಟನೆ ಕಾವೇರಿ ವನ್ಯಜೀವಿ ಅರಣ್ಯ ವಲಯ ವ್ಯಾಪ್ತಿಯ ಚಿಕ್ಕಿಂದುವಾಡಿ ಗ್ರಾಮದ ಸಮೀಪ ಕಂಡು ಬಂದಿದ್ದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ .

ಚಿಕ್ಕಿಂದವಾಡಿ ಗ್ರಾಮದ ಕರಿಯನಪುರ ಗ್ರಾಮದ ರಾಚಯ್ಯ ಎಂಬ ವ್ಯಕ್ತಿ ಹಸುಗಳನ್ನು ಮೇಯಿಸುತ್ತಿದ್ದಾಗ ಕಾಣೆಯಾಗಿದ್ದ ಹಸುವೊಂದನ್ನು ಹುಡುಕಿಕೊಂಡು ಹೋದಾಗ ಚಿರತೆಯು ಬೇಟೆಯಾಡಿ ತಿನ್ನುತ್ತಿರುವ ದೃಶ್ಯವನ್ನು ಕಣ್ಣಾರೆ ಕಂಡು ಭಯಭೀತನಾಗಿ ಓಡಿ ಬಂದು ಗ್ರಾಮಸ್ಥರ ಬಳಿ ವಿಷಯ ತಿಳಿಸಿದ್ದಾನೆ. ತಕ್ಷಣ ಜನರ ಗುಂಪು ಹೋಗಿ ಚಿರತೆಯನ್ನು ಓಡಿಸಿರುವ ಘಟನೆ ನಡೆದಿದೆ.

ಈ ಘಟನೆಯಿಂದ ಪಶುಪಾಲಕರಾಗಿರುವ ಗ್ರಾಮಸ್ಥರು ಭಯಬೀತರಾಗಿದ್ದು, ಬೇಟೆಯ ರುಚಿಕಂಡಿರುವ ಚಿರತೆಯು ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಹಸು ಕುರಿಗಳನ್ನು ಬೇಟೆಯಾಡಬಹುದು. ಆದ್ದರಿಂದ
ಅರಣ್ಯ ಇಲಾಖೆಯವರು ಸೂಕ್ತ ಸ್ಥಳದಲ್ಲಿ ಬೋನು ಇಟ್ಟು ಚಿರತೆಯನ್ನು ಬಂಧಿಸಬೇಕು, ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!