ಸರಗೂರು : ಗೊಂತಗಾಲದಹುಂಡಿ ಗ್ರಾಮದ ನಾಗಮಣಿ(೨೬) ಎಂಬ ಮಹಿಳೆಯು ಕಳೆದ ಅ.31 ರಂದು ಮನೆಯಿಂದ ಹೊರ ಹೋದವರು ಈವರೆವಿಗೂ ಪತ್ತೆಯಾಗಿಲ್ಲ ಎಂದು ಸರಗೂರು ಠಾಣೆಯಲ್ಲಿ ದೂರು ದಾಖಲಾಗಿಸಲಾಗಿದೆ.
ಇವರು ಅಂದು ಬೆಳಿಗ್ಗೆ ಮನೆಯಲ್ಲಿ ಯಾರಿಗೂ ಹೇಳದೆ ಹೋದವರು ಇದುವರೆಗೂ ವಾಪಸ್ ಬಂದಿಲ್ಲ ಎಂದು ಆಕೆಯ ಪತಿ ಚಿಕ್ಕನಾಯಕ ಸರಗೂರು ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿ ಸುಳಿವಿಗಾಗಿ ಮನವಿ ಮಾಡಿದ್ದಾರೆ.
ಚಹರೆ: ದುಂಡುಮುಖ, ಬೆಳಿಯ ಬಣ್ಣ, ಸಾಧಾರಣ ಮೈಕಟ್ಟು, ೪.೫ ಅಡಿ ಎತ್ತರ , ಗದ್ದದ ಕೆಳಗಡೆ ಗಾಯದ ಗುರುತಿದೆ. ಕನ್ನಡ ಮಾತನಾಡುತ್ತಾರೆ. ಈ ಮಹಿಳೆಯ ಬಗ್ಗೆ ಮಾಹಿತಿ ತಿಳಿದಲ್ಲಿ ಸರಗೂರು ಪೊಲೀಸ್ ಠಾಣೆಯನ್ನು (೦೮೨೨೮-೨೬೫೫೪೨, ಮೊ.ಸಂ.:೯೪೮೦೮೦೫೦೬೪) ಸಂಪರ್ಕಿಸುವಂತೆ ಕೋರಲಾಗಿದೆ.





