Mysore
19
clear sky

Social Media

ಬುಧವಾರ, 14 ಜನವರಿ 2026
Light
Dark

ಕೆವಿಎನ್ ದೊಡ್ಡಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ, ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ

ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದಲ್ಲಿ ದನಗಾಹಿಯ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದ ಚಿರತೆ ಗ್ರಾಮದಲ್ಲಿ ಪುನಃ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.

ಕಾವೇರಿ ವನ್ಯಧಾಮದ ಕೆವಿಎನ್ ದೊಡ್ಡಿ ಗ್ರಾಮದಲ್ಲಿ ಚಿರತೆ ಸೆರೆಹಿಡಿಯಲು ಇಟ್ಟಿರುವ ಬೋನು
ಕಾವೇರಿ ವನ್ಯಧಾಮದ ಕೆವಿಎನ್ ದೊಡ್ಡಿ ಗ್ರಾಮದಲ್ಲಿ ಚಿರತೆ ಸೆರೆಹಿಡಿಯಲು ಇಟ್ಟಿರುವ ಬೋನು

ಜಾನುವಾರು ಮೇಯಿಸಲು ಹೋಗಿದ್ದ ಕೆವಿಎನ್ ದೊಡ್ಡಿ ಗ್ರಾಮದ ಗೋವಿಂದಯ್ಯ ಎಂಬುವವರ ಮೇಲೆ ಚಿರತೆ ದಾಳಿ ಮಾಡಿತ್ತು. ತೀವ್ರವಾಗಿ ಗಾಯಗೊಂಡಿದ್ದ ಗೋವಿಂದಯ್ಯ ಸ್ಥಳದಲ್ಲೇ ಮೃತಪಟ್ಟಿದ್ದರು. ದನಗಾಹಿಯ ಮೇಲೆ ದಾಳಿ ಮಾಡಿರುವ ಚಿರತೆಯನ್ನು ಹಿಡಿದು ಬೇರೆಡೆ ಬಿಡುವಂತೆ ಗ್ರಾಮಸ್ಥರಿಂದ ವ್ಯಾಪಕ ಒತ್ತಾಯ ಕೇಳಿ ಬಂದಿತ್ತು.

ಬಳಿಕ ಶಾಸಕ ಆರ್. ನರೇಂದ್ರ ಹಾಗೂ ಅರಣ್ಯಾಧಿಕಾರಿಗಳು ಮೃತರ ಮನೆಗೆ ತೆರಳಿ ಸಾಂತ್ವನ ಹೇಳುವುದರ ಜತೆಗೆ ಚಿರತೆ ಹಿಡಿಯಲು ಕಾರ್ಯಚರಣೆ ಆರಂಭಿಸಲಾಗಿದ್ದು, ಗ್ರಾಮಸ್ಥರು ಸಹ ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದರು. ಮರುದಿನವೇ ಕಾರ್ಯಚರಣೆ ಆರಂಭಿಸಿ ಅರಣ್ಯ ಇಲಾಖೆ ಚಿರತೆ ದಾಳಿ ಮಾಡಿದ್ದ ಪ್ರದೇಶ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕ್ಯಾಮರಾ ಹಾಗೂ ಬೋನ್ ಗಳನ್ನು ಅಳವಡಿಸಿ ಚಿರತೆ ಚಲನವಲನಗಳನ್ನು ಪರಿಶೀಲನೆ ನಡೆಸುತ್ತಿದೆ. ಹೀಗಿದ್ದರೂ ಬುಧವಾರ ಮತ್ತೆ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರು ಮತ್ತಷ್ಟು ಭಯಭೀತರನ್ನಾಗುವಂತೆ ಮಾಡಿದೆ. ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿರುವುದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕಾರ್ಯಾಚರಣೆ  ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಎಸಿಎಫ್ ಎಂ.ಎನ್ ಅಂಕರಾಜು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!