Mysore
23
haze

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಮೈಸೂರಿನ ಕುವರಿಯರು

ಮೈಸೂರು: ಫೆ.8ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾ ಉತ್ಸವ ‘ಖೇಲೋ ಇಂಡಿಯಾ ಯೂತ್ ಗೇಮ್ಸ್’ನಲ್ಲಿ ಮೈಸೂರಿನ ವರ್ಷ(13 ವರ್ಷ) ಮತ್ತು ನಮ್ರತಾ (9 ವರ್ಷ) ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ ಎಂದು ಕಳರಿ ಸಾಧನ ಮುಖ್ಯಸ್ಥ ವರುಣ್ ಯಾದವ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಇಬ್ಬರು ಹೆಣ್ಣುಮಕ್ಕಳು ಕಳರಿ ಪಯಟ್ಟು ವಿಭಾಗದಲ್ಲಿ ಮೈಸೂರಿನಿಂದ ಪ್ರತಿನಿಧಿಸುತ್ತಿರುವ ಮೊದಲ ಕ್ರೀಡಾಪಟುಗಳಾಗಿದ್ದಾರೆ. ಕರ್ನಾಟಕದಿಂದ 18 ಮಂದಿ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು, 16 ಮಂದಿ ಬೆಂಗಳೂರು ಮೂಲದವರು ಮತ್ತು ಇಬ್ಬರು ಮೈಸೂರಿನ ಕುವರಿಯರು ಎಂದು ವಿವರಿಸಿದರು. ಈ ಸ್ಪರ್ಧೆಯು ಸಬ್ ಜೂನಿಯರ್ ಗರ್ಲ್ಸ್ ಮತ್ತು ಜೂನಿಯರ್ ಗರ್ಲ್ಸ್ ವಿಭಾಗದಲ್ಲಿ ನಡೆಯುತ್ತದೆ. ಪರಸ್ಪರ ಕಾದಾಟ ಇರುವುದಿಲ್ಲ, ಕಲೆಯ ಪ್ರದರ್ಶನವಿರುತ್ತದೆ ಎಂದು ತಿಳಿಸಿದರು.

ಕಳರಿ ಪಟುಗಳಾದ ವರ್ಷ ಮತ್ತು ನಮ್ರತಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!