Mysore
27
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ನವೆಂಬರ್‌ 23ರಂದು ಕೆಆರ್‌ಎಸ್‌, ಕಬಿನಿ, ಹೇಮಾವತಿ ಜಲಾಶಯದಲ್ಲಿ ನೀರು ಎಷ್ಟಿದೆ?

ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಭಾಗದ ಪ್ರಮುಖ ನದಿಗಳಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಗಳಾದ ಕೃಷ್ಣ ರಾಜ ಸಾಗರ, ಕಬಿನಿ ಜಲಾಶಯ ಹಾಗೂ ಹೇಮಾವತಿ ಜಲಾಶಯಗಳಲ್ಲಿ ಇಂದು ( ನವೆಂಬರ್‌ 23 ) ನೀರಿನ ಮಟ್ಟ ಎಷ್ಟಿದೆ, ಜಲಾಶಯಕ್ಕೆ ಬರುತ್ತಿರುವ ಒಳಹರಿವು ಎಷ್ಟಿದೆ ಹಾಗೂ ಜಲಾಶಯದಿಂದ ಎಷ್ಟು ನೀರನ್ನು ಹೊರಗೆ ಬಿಡಲಾಗುತ್ತಿದೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಕೆಆರ್‌ಎಸ್‌ ಜಲಾಶಯ

124.80 ಅಡಿಗಳಷ್ಟು ಸಾಮರ್ಥ್ಯವಿರುವ ಕೆಆರ್‌ಎಸ್‌ ಜಲಾಶಯದಲ್ಲಿ ಇಂದು 99.10 ಅಡಿ ನೀರು ಇದ್ದು 1450 ಕ್ಯೂಸೆಕ್‌ ನೀರಿನ ಒಳಹರಿವಿದೆ ಹಾಗೂ 3840 ಕ್ಯೂಸೆಕ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದೆ. ಈ ಹೊರಹರಿವು ಚಾನಲ್‌ಗಳಿಗೆ ಬಿಡುವ ನೀರು ಹಾಗೂ ಕುಡಿಯುವ ನೀರಿಗಾಗಿ ಹೊರಬಿಡುವ ನೀರಿನ ಪ್ರಮಾಣವನ್ನೂ ಸಹ ಒಳಗೊಂಡಿದೆ. 49.482 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 22.113 ಟಿಎಂಸಿ ನೀರಿದೆ.

ಹೇಮಾವತಿ ಜಲಾಶಯ

2922.00 ಅಡಿಗಳಷ್ಟು ಸಾಮರ್ಥ್ಯವಿರುವ ಕೆಆರ್‌ಎಸ್‌ ಜಲಾಶಯದಲ್ಲಿ ಇಂದು 2893.10 ಅಡಿ ನೀರು ಇದ್ದು 469 ಕ್ಯೂಸೆಕ್‌ ನೀರಿನ ಒಳಹರಿವಿದೆ ಹಾಗೂ 1300 ಕ್ಯೂಸೆಕ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದೆ. 15.797 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 22.113 ಟಿಎಂಸಿ ನೀರಿದೆ.

ಕಬಿನಿ ಜಲಾಶಯ

2284.00 ಅಡಿಗಳಷ್ಟು ಸಾಮರ್ಥ್ಯವಿರುವ ಕೆಆರ್‌ಎಸ್‌ ಜಲಾಶಯದಲ್ಲಿ ಇಂದು 2273.80 ಅಡಿ ನೀರು ಇದ್ದು 221 ಕ್ಯೂಸೆಕ್‌ ನೀರಿನ ಒಳಹರಿವಿದೆ ಹಾಗೂ 1700 ಕ್ಯೂಸೆಕ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದೆ. 19.52 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 13.62 ಟಿಎಂಸಿ ನೀರಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ