Mysore
22
haze

Social Media

ಗುರುವಾರ, 25 ಡಿಸೆಂಬರ್ 2025
Light
Dark

ಬೆಳೆ ನಷ್ಟಕ್ಕೆ ಕಾರಣವಾಗಿದ್ದ ಕಂಪೆನಿಗೆ 2.11 ಲಕ್ಷ ರೂ. ದಂಡ

ಕೊಳ್ಳೇಗಾಲ: ಈರುಳ್ಳಿ ಬೆಳೆಗೆ ಖಾಸಗಿ ಕಂಪೆನಿಯ ಔಷಧ ಸಿಂಪಡಿಸಿ ಬೆಳೆ ರೈತರಿಗೆ ನಷ್ಟವಾಗಿದ್ದ ಹಿನ್ನೆಲೆಯಲ್ಲಿ ಖಾಸಗಿ ಕಂಪೆನಿಗೆ ಚಾ.ನಗರ ಜಿಲ್ಲಾ ಗ್ರಾಹಕರ ವೇದಿಕೆ ೨.೧೧ ಲಕ್ಷ ರೂ. ದಂಡ ವಿಧಿಸಿದೆ.

ಚಾ.ನಗರ ತಾಲ್ಲೂಕು ಯಮಗುಂಬ ಗ್ರಾಮದ ವೈ.ಕೆ.ಮಂಜುನಾಥ್, ನಾಗಮ್ಮ, ಭ್ರವಾರಂಭ ಅವರು ೨.೭.೨೦೨೧ರಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ಈರುಳ್ಳಿ ಬೆಳೆಗೆ ಅಡಷಾಪ್ ಪ್ರಮೋಷನ್ ರಾಜ್ ಕೋಟ್ ಕಂಪನಿ ತಯಾರಿಸಿದ್ದ ಆಯುರ್ವೇದ ಔಷಧಿಯನ್ನು ಹೆಚ್ಚು ಇಳುವರಿ ಬರಲಿ ಎಂಬ ಉದ್ದೇಶದಿಂದ ಸಿಂಪಡಿಸಿದ್ದರು. ಆದರೆ ಔಷಧಿ ಸಿಂಪಡಿಸಿದ್ದ ಕೆಲವೇ ತಿಂಗಳಲ್ಲಿ ಬೆಳೆ ಸಂಪೂರ್ಣ ಒಣಗಿ ಹೋಗಿತ್ತು. ಇದ್ದರಿಂದ ಒಟ್ಟು ೨ ಲಕ್ಷ ರೂ. ನಷ್ಟವಾಗಿದ್ದು, ಪರಿಹಾರ ಕೊಡಿಸಬೇಕೆಂದು ಚಾ.ನಗರ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು.
ಈ ಬಗ್ಗೆ ವೇದಿಕೆಯ ಪೀಠಾಧ್ಯಕ್ಷರಾದ ನ್ಯಾಯಾಧೀಶರಾದ ನವೀನ್ ಕುವಾರಿ, ಪೀಠ ಸದಸ್ಯರಾದ ಶ್ರೀನಿಧಿ, ಭಾರತಿ ಅವರು ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ನಷ್ಟಕ್ಕೆ ಒಳಗಾದ ರೈತರಿಗೆ ೨.೧೧ ಲಕ್ಷ ರೂ. ಪರಿಹಾರ ನೀಡುವಂತೆ ನ.೩ರಂದು ಆದೇಶ ನೀಡಿದ್ದಾರೆ. ಒಂದು ತಿಂಗಳ ಒಳಗೆ ಪರಿಹಾರ ನೀಡದಿದ್ದರೆ ಶೇ.೧೮ ರಷ್ಟು ಬಡ್ಡಿ ಸೇರಿಸಿ ಕೊಡುವಂತೆ ಸೂಚಿಸಿದ್ದಾರೆ.

ರೈತರ ಪರ ಹಿರಿಯ ವಕೀಲ ತೀರ್ಥಪ್ರಸಾದ್ ವಾದ ಮಂಡಿಸಿದರು. ಔಷಧಿ ಕಂಪನಿ ಪರ ವಕೀಲ ವೀರಭದ್ರಸ್ವಾಮಿ ವಕಾಲತ್ತು ವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!