ಕೊಳ್ಳೇಗಾಲ: ಗ್ರಾಮಾಂತರ ಪೊಲೀಸ್ ಠಾಣೆಯ ನೂತನ ಸಬ್ ಇನ್ಸ್‌ಪೆಕ್ಟರ್ ಆಗಿ ಗಣೇಶ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇವರು ಹಾಸನ ಜಿಲ್ಲೆಯ ಆಲೂರುನಿಂದ ಠಾಣೆಯಿಂದ ವರ್ಗಾವಣೆಯಾಗಿ ಬಂದಿದ್ದು. ಈ ಹಿಂದೆ ಇದ್ದ ಮಂಜುನಾಥ್ ಅವರನ್ನು ಮಂಡ್ಯ ಪೂರ್ವ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ವೀರಣ್ಣಾರಾಧ್ಯ ಅವರನ್ನು ನಂಜನಗೂಡು ಪೊಲೀಸ್ ಠಾಣೆಗೆ ಹಾಗೂ ಪಟ್ಟಣ ಪೊಲೀಸ್ ಠಾಣೆಯ ಅಪರಾಧ ಸಬ್ ಇನ್ಸ್‌ಪೆಕ್ಟರ್ ಉಮಾವತಿ ಅವರನ್ನು ವರುಣ ಪೊಲೀಸ್ ಠಾಣೆಗೆ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ. ಉಮಾವತಿ ಅವರ ಸ್ಥಾನಕ್ಕೆ ಕೆ.ಎಂ ದೊಡ್ಡಿ ಪೊಲೀಸ್ ಠಾಣೆಯಲ್ಲಿದ್ದ ರಾಮಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.





