Mysore
28
scattered clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಮಡಿಕೇರಿ | ಕಾಡುಕೋಣ ಬೇಟೆ: ಇಬ್ಬರ ಬಂಧನ

ಸಿದ್ದಾಪುರ : ಕುಶಾಲನಗರ ವಲಯ ಅರಣ್ಯ ವ್ಯಾಪ್ತಿ ವರೆಗುಂದ ಮೀಸಲು ಅರಣ್ಯದಲ್ಲಿ ಎರಡು ಕಾಡುಕೋಣಗಳನ್ನು ಗುಂಡಿಟ್ಟು ಕೊಂದ ಗುಹ್ಯ ಗ್ರಾಮದ ಕೂಡುಗದ್ದೆ ನಿವಾಸಿ ಅಸ್ಕರ್ (26) ಹಾಗೂ ಸಿದ್ದಾಪುರದ ಹೈಸ್ಕೂಲ್ ಪೈಸಾರಿ ನಿವಾಸಿ ವಿನೋದ್ ಕುಮಾರ್ (34) ಎಂಬುವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಕಳೆದ ಮಾ.31ರಂದು ಕುಶಾಲನಗರ ವಲಯದ ಅವರೆಗುಂದ ಮೀಸಲು ಅರಣ್ಯಕ್ಕೆ ದುಷ್ಕರ್ಮಿಗಳು ಅಕ್ರಮ ಪ್ರವೇಶ ಮಾಡಿ ರಾತ್ರಿ ವೇಳೆ ಕಾಡುಕೋಣಗಳನ್ನು ಕೊಂದಿದ್ದರು. ಅರಣ್ಯದಲ್ಲಿ ಗುಂಡಿನ ಶಬ್ದ ಕೇಳಿದ ಸಂದರ್ಭ ಅವರೆಗುಂದ ನಿವಾಸಿಗಳು ಅರಣ್ಯಕ್ಕೆ ಧಾವಿಸಿದ್ದು, ಎರಡು ಕಾಡುಕೋಣಗಳು ಬಲಿಯಾಗಿದ್ದು, ಆರೋಪಿಗಳು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ ತನಿಖೆ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ. ಕೂಡುಗದ್ದೆ ನಿವಾಸಿ ಸೂರಿ ಸುಬ್ರಮಣ್ಯ ಸೇರಿದಂತೆ ನಾಲ್ಕು ಮಂದಿ ಪರಾರಿಯಾಗಿದ್ದು, ಅಧಿಕಾರಿಗಳು ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಕಾಡುಕೋಣ ಹತ್ಯೆಗೆ ಬಳಸಿದ್ದ ಬಂದೂಕು ಹಾಗೂ ಕಾರು ಪತ್ತೆಯಾಗಿಲ್ಲ.

ಕಾರ್ಯಾಚರಣೆಯಲ್ಲಿ ಎ.ಸಿ.ಎಫ್. ಗೋಪಾಲ್.ಎ.ಎ., ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್, ಉಪ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Tags:
error: Content is protected !!