Mysore
17
overcast clouds

Social Media

ಮಂಗಳವಾರ, 17 ಡಿಸೆಂಬರ್ 2024
Light
Dark

ವಿರಾಜಪೇಟೆ ಪುರಸಭೆ ಕಾಂಗ್ರೆಸ್‌ ತೆಕ್ಕೆಗೆ

ಮಡಿಕೇರಿ: ವಿರಾಜಪೇಟೆ ಪುರಸಭೆಯಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ 18 ವರ್ಷಗಳ ಬಳಿಕ ಕಾಂಗ್ರೆಸ್‌ ಗದ್ದುಗೆ ಏರಿ ದಾಖಲೆ ಮಾಡಿದೆ.

ಎರಡನೇ ಅವಧಿಗೆ ಅಧ್ಯಕ್ಷರಾಗಿ ದೇಚಮ್ಮ ಕಾಳಪ್ಪ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಫೌಝಿಯಾ ತಬಸುಂ ಅವರು ಆಯ್ಕೆಯಾಗಿದ್ದಾರೆ.

ವಿರಾಜಪೇಟೆ ಪುರಸಭೆಯಲ್ಲಿ ಒಟ್ಟು 18 ಸ್ಥಾನ ಬಲವಿದ್ದು, ದೇಚಮ್ಮ ಕಾಳಪ್ಪ 11 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.  ಪುರಸಭೆಯಲ್ಲಿ ಬಿಜೆಪಿಯ 8, ಕಾಂಗ್ರೆಸ್‌ನ 6, ಜೆಡಿಎಸ್‌ನ 1 ಹಾಗೂ ಮೂವರು ಪಕ್ಷೇತರ ಸದಸ್ಯರಿದ್ದರು.

ಇನ್ನು ಬಿಜೆಪಿಯ ಜೂನಾ ಸುನೀತಾ 8 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಚುನಾವಣೆಯಲ್ಲಿ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಭಾಗಿಯಾಗಿದ್ದರು. ಈ ವೇಳೆ ಪುರಸಭೆ ಮುಂಭಾಗ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

 

Tags: