Mysore
21
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ವಿರಾಜಪೇಟೆ | ಸ್ಪಾ ಸೆಂಟರ್‌ನಲ್ಲಿ ವೇಶ್ಯಾವಾಟಿಕೆ ; ನಾಲ್ವರು ಮಹಿಳೆಯರ ರಕ್ಷಣೆ

ವಿರಾಜಪೇಟೆ : ಖಾಸಗಿ ಕಟ್ಟಡವನ್ನು ಬಾಡಿಗೆಗೆ ಪಡೆದು ಬ್ಯೂಟಿಪಾರ್ಲರ್‌ನೊಂದಿಗೆ ಪರವಾನಿಗೆ ಇಲ್ಲದೇ ಸ್ಪಾ ಸೆಂಟರ್ ನಡೆಸುತ್ತಿದ್ದುದಲ್ಲದೆ, ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ನಾಲ್ವರನ್ನು ಬಂಧಿಸಲಾಗಿದೆ. ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಿ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ.

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪಿ.ಪಿ. ಪ್ರದೀಪನ್(೪೮) ಮತ್ತು ಕಲೇಶ್‌ಕುಮಾರ್(೪೫), ಶಾಜಿ(೩೮), ವಿರಾಜಪೇಟೆ ಅಮ್ಮತ್ತಿ ಗ್ರಾಮದ ನೆಲ್ಲಮಕ್ಕಡ ಎ ಪೊನ್ನಣ್ಣ(೪೮) ಬಂಧಿತ ಆರೋಪಿಗಳು.

ವಿರಾಜಪೇಟೆ ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಖಾಸಗಿ ಕಟ್ಟಡದಲ್ಲಿ ಪ್ರದೀಪನ್ ಮತ್ತು ಶಿಜು ಎಂಬುವವರು ಆರೆಂಜ್ ಫ್ಯಾಮಿಲಿ ಬ್ಯೂಟಿ ಪಾರ್ಲರ್ ಮತ್ತು ಸ್ಪಾ ಎಂಬ ಮಳಿಗೆ ನಡೆಸುತ್ತಿದ್ದರು. ಇಲ್ಲಿ ಸುಮಾರು ೬ ತಿಂಗಳುಗಳಿಂದ ಹೊರ ರಾಜ್ಯಗಳ ಐಷಾರಾಮಿ ವಾಹನಗಳು ಬಂದು ನಿಲುಗಡೆಗೊಂಡು ಮರಳುತ್ತಿದ್ದು, ವೇಶ್ಯವಾಟಿಕೆಯು ಚಟುವಟಿಕೆಗಳು ನಡೆಯುತ್ತಿದೆ ಎಂಬುದಾಗಿ ಸ್ಥಳೀಯರಲ್ಲಿ ಸಂಶಯ ಮೂಡಿತ್ತು.

ಈ ಸಂಬಂಧ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬ್ಯೂಟಿ ಪಾರ್ಲರ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಪರವಾನಿಗೆ ಪಡೆದು ಅಕ್ರಮವಾಗಿ ಸ್ಪಾ, ಮಸಾಜ್ ಸೆಂಟರ್ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಅಲ್ಲದೆ ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.

Tags:
error: Content is protected !!