ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9 ಗಂಟೆಗೆ ನಡೆದಿದೆ .
ಅಪಘಾತಕ್ಕೀಡದ ಪ್ರಾಣಿಯನ್ನು ಕಂಡು ಹುಲಿ ಮರಿ ಎಂದು ಭಾವಿಸಿ ಸ್ಥಳೀಯರು ಆತಂಕಕ್ಕೆ ಎದುರಾಗಿದ್ದರು. ಹಲವು ದಿನಗಳಿಂದ ಈ ಭಾಗದಲ್ಲಿ ಹುಲಿ ಸಂಚಾರವಿದೆಯೆಂದು ಸಾರ್ವಜನಿಕರು ಅರಣ್ಯ ಇಲಾಖೆಗೆ ತಿಳಿಸಿದರು ಕೂಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಗ್ರಾಮಸ್ಥರು ಆತಂಕ ಪಟ್ಟಿದ್ದರು. ಬಳಿಕ ಮೃತಪಟ್ಟಿರುವುದು ಚಿರತೆ ಬೆಕ್ಕು ಮರಿ ಎಂದು ದೃಢಪಡುತ್ತಿದ್ದಂತೆ ಇಲ್ಲಿನ ನಿವಾಸಿಗಳು ನಿಟ್ಟುಸಿರುಬಿಟ್ಟಿದ್ದಾರೆ.
ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.