ವಿರಾಜಪೇಟೆ: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ನಿವಾಸಿ ಕರಿನೆರವಂಡ ಜಿತನ್ ಎಂಬುವವರ ಮನೆಯಲ್ಲಿ ಕಾಣಿಸಿಕೊಂಡಿದ್ದ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ.
ದಿಡೀರ್ ಕಾಣಿಸಿಕೊಂಡ ಉರುಗ ನೋಡಿ ಮನೆ ಮಂದಿ ಭಯಬೀತರಾಗಿದ್ದರು. ಕೂಡಲೇ ಉರಗ ತಜ್ಞರನ್ನು ಸಂಪರ್ಕಿಸಿದ್ದಾರೆ. ನಗರ ಪ್ರದೇಶದಿಂದ ದೂರವಾಗಿರುವ ಕಾರಣ ತಜ್ಞರು ಬರಲು ಹಿಂದೇಟು ಹಾಕಿದ್ದಾರೆ. ಜಿತನ್ ಅವರು ಸ್ನೇಹಿತರ ಸಹಾಯದಿಂದ ವಿರಾಜಪೇಟೆ ನಗರದ ಆಟೋ ಚಾಲಕ ಸತೀಶ್ ಅವರನ್ನು ಸಂಪರ್ಕಿಸಿದಾಗ ಸತೀಶ್ ಕೂಡಲೇ ಸ್ಥಳಕ್ಕಾಗಲಿಸಿದ್ದಾರೆ.
ಮನೆಯ ಕೋಣೆಯೊಂದರಲ್ಲಿ ಅವಿತುಕೊಂಡ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಪತ್ತೆಹಚ್ಚಿ ಸುಮಾರು ಮೂರು ತಾಸುಗಳ ಅವಿರತ ಸಾಹಸದಿಂದ ಚೀಲದಲ್ಲಿ ಸೇರಿಸುವಲ್ಲಿ ಸಫಲರಾಗಿದ್ದಾರೆ. ಸರ್ಪವು ಸುಮಾರು ೧೨ ಅಡಿ ಉದ್ದವಿದ್ದು, ೦೯-೧೦ ಕೆ.ಜಿ ತೂಕವಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಸತೀಶ್ ಮಾಹಿತಿ ನೀಡಿದರು.
ಮಾಕೂಟ್ಟ ಅಭಯಾರಣ್ಯಕ್ಕೆ ತೆರಳಿ ಸರ್ಪವನ್ನು ಕಾಡಿಗೆ ಬಿಡಲಾಯಿತು.