Mysore
17
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಟಿಪ್ಪರ್ ಲಾರಿ, ಕಾರು ನಡುವೆ ಭೀಕರ ಅಪಘಾತ: ಓರ್ವ ವ್ಯಕ್ತಿ ಸಾವು

ಕೊಡಗು: ಜಿಲ್ಲೆಯ ಬಾಳೆಲೆ ಸಮೀಪದ ಕೈನಾಟಿಯಲ್ಲಿ ಟಿಪ್ಪರ್‌ ಲಾರಿ ಹಾಗೂ ಮಾರುತಿ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಮರಳು ಲಾರಿಯ ಅತಿ ವೇಗದ ಚಾಲನೆಗೆ ಈ ಅಪಘಾತ ಸಂಭವಿಸಿದ್ದು, ದುರಂತದ ತೀವ್ರತೆಗೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಈ ದುರ್ಘಟನೆಯಲ್ಲಿ ಬಾಳೆಲೆ ನಿವಾಸಿಯಾಗಿರುವ ಉದ್ಯಮಿ ಅಡ್ಡೆಂಗಡ ಸಜನ್‌ ಎಂಬುವವರು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ.

ಇನ್ನೂ ಈ ಅಪಘಾತಕ್ಕೆ ಸಂಬಂಧಿಸಿದಂತೆ ಬಾಳೆಲೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Tags:
error: Content is protected !!