ಗೋಣಿಕೊಪ್ಪಲು: ನಿಲ್ಲಿಸಲಾಗಿದ್ದ ಆಟೋ ರಿಕ್ಷಾ ಮೇಲೆ ಟಿಂಬರ್ ಲಾರಿ ಬಿದ್ದು, ಆಟೋರಿಕ್ಷಾ ಸಂಪೂರ್ಣ ಜಖಂಗೊಂಡಿರುವ ಘಟನೆ ವಿರಾಜಪೇಟೆ-ಗೋಣಿಕೊಪ್ಪ ಮುಖ್ಯ ರಸ್ತೆಯ ಕೈಕೇರಿ ನಯರಾ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಇಲ್ಲಿನ ಟೈಯರ್ ಶಾಪ್‌ನಲ್ಲಿ ಟಯರ್ ಬದಲಿಸಲು ಆಟೋ ರಿಕ್ಷಾವೊಂದನ್ನು ನಿಲ್ಲಿಸಲಾಗಿತ್ತು. ಇದೇ ಸಮಯದಲ್ಲಿ ಗಾಳಿ ತುಂಬಿಸಲು ಬಂದಿದ್ದ ಟಿಂಬರ್ ಲಾರಿ ಮಗುಚಿ ಬಿದ್ದಿದೆ. ಆಟೋ ರಿಕ್ಷಾ ಮೇಲೆಯೇ ಲಾರಿ ಮಗುಚಿದ್ದರಿಂದ ಆಟೋ ಸಂಪೂರ್ಣ ಜಖಂಗೊಂಡಿದೆ. ಆಟೋರಿಕ್ಷದಲ್ಲಿ ಯಾರು ಇಲ್ಲದ್ದರಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ.





