Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಯದುವೀರ್‌ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ನೂಕು ನುಗ್ಗಲು; ಇಬ್ಬರು ಬಿಜೆಪಿ ಮಾಜಿ ಶಾಸಕರ ಪರ್ಸ್‌ ಎಗರಿಸಿದ ಕಳ್ಳರು!

ಕೊಡಗು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಸದ್ಯ ರಾಜಕಾರಣಿಗಳು ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಚಾರದಲ್ಲಿ ನೂಕು ನೂಗ್ಗಲು ಸಹಜ. ಇದನ್ನೇ ಗುರಿಮಾಡಿಕೊಂಡ ಕಳ್ಳರು ಮೈಸೂರು-ಕೂಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಹತ್ತಿರ ಸೆಲ್ಫಿ ಕ್ಲಿಕ್ಕಿಸಲು ಬೇಕಂತಲೇ ನೂಕು ನೂಗ್ಗಲು ಎಬ್ಬಿಸಿ, ಇಬ್ಬರು ಮಾಜಿ ಶಾಸಕರ ಪರ್ಸ್‌ ಸೇರಿದಂತೆ ಅನೇಕರ ಜೇಬಿನಲ್ಲಿದ್ದ ಪರ್ಸ್‌ ಕಳ್ಳತ ಮಾಡಿದ್ದಾರೆ. ಒಟ್ಟು ಅಂದಾಜು 5 ಲಕ್ಷ ರೂಪಾಯಿಗೂ ಅಧಿಕ ಹಣ ಲಪಟಾಯಿಸಿದ್ದಾರೆ.

ಇಂದು ( ಮಾರ್ಚ್‌ 27 ) ಕುಶಾಲನಗರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಾಲ್ಗೊಂಡಿದ್ದರು. ಅಷ್ಟು ಭದ್ರತೆಯ ನಡುವೆಯೂ ಕಳ್ಳತನವಾಗಿದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿಯ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್‌ ಮತ್ತು ಕೆಜಿ ಬೋಪಯ್ಯ ಅವರ ಪರ್ಸ್‌ ಸಹ ಕಳ್ಳತನವಾಗಿದೆ. ಅಪ್ಪಚ್ಚು ರಂಜನ್‌ ಅವರ ಪರ್ಸ್‌ನಲ್ಲಿ 25 ಸಾವಿರ ಹಾಗೂ ಬೋಪಯ್ಯ ಅವರ ಪರ್ಸ್‌ನಲ್ಲಿ 17 ಸಾವಿರ ಇತ್ತು. ಇವರಿಬ್ಬರ ಜೊತೆಗೆ ಇನ್ನೂ ಅನೇಕರ ಜೇಬಿನಲ್ಲಿದ್ದ ಪರ್ಸ್‌ ಸಹ ಕಳ್ಳವಾಗಿದೆ. ಕಳ್ಳರ ಪತ್ತೆಗೆ ಮಡಿಕೇರಿ ನಗರ ಪೊಲೀಸರು ಕಾರ್ಯಚರಣೆ ಶುರುಮಾಡಿದ್ದಾರೆ.

ಇನ್ನು ರಾಜಕೀಯ ಕಾರ್ಯಕ್ರಮದಲ್ಲಿ ಈ ರೀತಿ ಕಳ್ಳವಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕರ್ನಾಟಕದ ರಾಜಕೀಯ ಕಾರ್ಯಕ್ರಮಗಳಲ್ಲಿ ಈ ರೀತಿಯ ಘಟನೆಗಳು ನಡೆದಿರುವುದನ್ನು ಕಾಣಬಹುದು. ಈಗ ಲೋಕಸಭೆ ಚುನಾವಣೆ ಇದೆ, ಜನರು ತಮ್ಮಮ್ಮ ನಾಯಕರನ್ನು ನೋಡಲು ಮುಗಿಬೀಳುವುದು ಸಹಜ. ಇದನ್ನೇ ಕಾಯುವ ಕಳ್ಳರು ಗುಂಪಿನೊಳಗೆ ಬಂದು ಸೇರಿಕೊಂಡು ನೂಕು ನುಗ್ಗಲು ಎಬ್ಬಿಸಿ ಜೇಬುಗಳಿಗೆ ಕೈ ಹಾಕಿ ಪರಾರಿಯಾಗುತ್ತಾರೆ. ರಾಜಕೀಯ ನಾಯಕರು, ಕಾರ್ಯಕರ್ತರು, ಸಾರ್ವಜನಿಕರು ಖದೀಮರಿಂದ ಎಚ್ಚರಿಕೆ ಇರುವುದು ಒಳಿತು.

Tags: