ಸುಂಟಿಕೊಪ್ಪ: ವನ್ಯ ಪ್ರಾಣಿಯ ದಾಳಿಗೆ ಸಿಲುಕಿ 4 ತಿಂಗಳ ಕರುವೊಂದು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪದ ಮಳ್ಳೂರಿನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಮಳ್ಳೂರಿನ ನಿವಾಸಿ ತೇಜಕುಮಾರ್ ಎಂಬವರಿಗೆ ಸೇರಿದ 4 ತಿಂಗಳ ಕರುವನ್ನು ಮೇಯಲು ಹಾರಂಗಿ ಹಿನ್ನೀರಿನ ಸಮೀಪವಿರುವ ಕಾಫಿ ಕಣದ ಪಕ್ಕದಲ್ಲಿ ಕಟ್ಟಿ ಹಾಕಲಾಗಿತ್ತು. ಈ ಸಂದರ್ಭದಲ್ಲಿ ವನ್ಯ ಪ್ರಾಣಿಯ ದಾಳಿಗೆ ಸಿಲುಕಿ ಕರು ಮೃತಪಟ್ಟಿದೆ. ತೇಜಕುಮಾರ್ ಸ್ಥಳಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಕರುವಿನ ಅರ್ಧ ದೇಹವನ್ನು ಚಿರತೆ ಅಥವಾ ಹುಲಿ ದಾಳಿ ನಡೆಸಿ ತಿಂದು ಹಾಕಿರುವುದು ತಿಳಿದುಬಂದಿದೆ.
ಕೂಡಲೇ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆನೆಕಾಡು ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ.