ವಿರಾಜಪೇಟೆ: ಫೇಸ್‌ಬುಕ್ ಲೈವ್ ಮೂಲಕ ಆತ್ಮಹತ್ಯೆ ಯತ್ನ ವಿಡಿಯೋ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಸಾರ್ಟ್ ಮಾಜಿ ಸಿಬ್ಬಂದಿ ಪ್ರವೀಣ್ ಅರವಿಂದ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನನಗೆ ತುಂಬಾ ಅನ್ಯಾಯವಾಗಿದೆ. ಆದ್ದರಿಂದ ಈ ಪ್ರಪಂಚ ಬಿಟ್ಟು ಹೋಗುತ್ತಿದ್ದೇನೆ. ಹೆಂಡತಿ ಮಕ್ಕಳನ್ನು ಬಿಟ್ಟು ಹೋಗುತ್ತಿದ್ದೇನೆ. ನನಗಾದ ಅನ್ಯಾಯ ಹಾಗೂ ಟಾರ್ಚರ್ ಸಹಿಸಲಾಗುತ್ತಿಲ್ಲ ಎಂದು ಪ್ರವೀಣ್ ಅರವಿಂದ್ ಫೇಸ್‌ಬುಕ್‌ನಲ್ಲಿ ಲೈವ್ ವಿಡಿಯೋ ಮಾಡಿದ್ದರು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಮೈಸೂರಿನ ಲಷ್ಕರ್ ಮೊಹಲ್ಲಾ ಪೊಲೀಸರು ಪ್ರವೀಣ್ ಲೋಕೇಶನ್ ಹುಡುಕಿದ್ದು, ಪ್ರವೀಣ್‌ರನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಮೈಸೂರಿನಿಂದ ವಿರಾಜಪೇಟೆಗೆ ಪ್ರವೀಣ್‌ರನ್ನು ವಿಚಾರಣೆಗೆಂದು ಕರೆತರಲಾಗುತ್ತಿದ್ದು, ವಿಚಾರಣೆ ಬಳಿಕವೇ ಹೆಚ್ಚಿನ ಸತ್ಯಾಂಶ ಹೊರಬರಲಿದೆ.