Mysore
15
scattered clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಸೋಮವಾರಪೇಟೆ | ಸಂಚಾರ ನಿಯಮ ಉಲ್ಲಂಘನೆ ; ಬೈಕ್‌ ಸವಾರನಿಗೆ 18500 ರೂ. ದಂಡದ ಬಿಸಿ

ಮಡಿಕೇರಿ : ಸಂಚಾರ ನಿಯಮ ಉಲ್ಲಂಘಿಸಿದ ಬೈಕ್ ಸವಾರನೊಬ್ಬನಿಗೆ ಸೋಮವಾರಪೇಟೆ ಪೊಲೀಸರು ಬರೋಬ್ಬರಿ 18500 ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ.

ಸೋಮವಾರಪೇಟೆ ಜೂನಿಯರ್ ಕಾಲೇಜು ರಸ್ತೆಯಲ್ಲಿ ಬೈಕ್ ಸವಾರನೊಬ್ಬ ವೀಲಿಂಗ್ ಮಾಡುತ್ತಾ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ಪೊಲೀಸರು ಕಾರ್ಯಾಚರಣೆಗಿಳಿದು ‌ಈತನ ಬೈಕ್ ತಡೆದು ನಿಲ್ಲಿಸಿ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಮತ್ತು ಅಗತ್ಯ ದಾಖಲೆಗಳಿಲ್ಲದಿರುವುದು ಪತ್ತೆ ಆಗಿದೆ.

ಹೀಗೆ… ಬೈಕಿಮ ಸೈಲೆನ್ಸರ್ ಮಾಡಿಫೈ ಮಾಡಿದಕ್ಕೆ ರೂ. 500, ಕ್ರಮಬದ್ಧವಲ್ಲದ ನಂಬರ್ ಪ್ಲೇಟ್ ಆಳವಡಿಸಿದಕ್ಕಾಗಿ ರೂ. 500, ಚಾಲನಾ ಪರವಾನಗಿ ಇಲ್ಲದಿರುವುದಕ್ಕೆ ರೂ. 1000, ಅಪಾಯಕಾರಿ ಚಾಲನೆಗಾಗಿ ರೂ. 1000, ಸಂಚಾರಿ ನಿಯಮ ಉಲ್ಲಂಘನೆಗಾಗಿ ರೂ. 500, ಪೊಲೀಸರು ಸಿಗ್ನಲ್ ನೀಡಿದರೂ ನಿಲ್ಲಿಸದೇ ತೆರಳಿದಕ್ಕೆ ರೂ. 500, ರೇಸಿಂಗ್ ನಂತೆ ಅತೀವೇಗದಿಂದ ಚಾಲನೆ ಮಾಡಿದಕ್ಕಾಗಿ ರೂ. 5000, ಸುಳ್ಳು ಮಾಹಿತಿ ನೀಡಿದಕ್ಕಾಗಿ ರೂ. 1000, ಪ್ರಿ ವೀಲಿಂಗ್ ಮಾಡಿದಕ್ಕಾಗಿ ರೂ. 5000, ವಾಹನ ವಿಮೆ ಇಲ್ಲದಿದಕ್ಕಾಗಿ ರೂ. 1000, ಚಾಲನೆ ಸಂದರ್ಭ ಮೊಬೈಲ್ ಬಳಸಿದಕ್ಕಾಗಿ 1500, ದಾಖಲೆಗಳನ್ನು ಸಲ್ಲಿಸದಿರುವುದಕ್ಕೆ ರೂ. 500, ಹೆಲ್ಮೆಟ್ ಧರಿಸದಿರುವುದಕ್ಕೆ ರೂ. 500 ರಂತೆ ಒಟ್ಟು 18500 ರೂ. ದಂಡ ವಿಧಿಸಿದ್ದಾರೆ.

Tags:
error: Content is protected !!