ಮಡೀಕೇರಿ: ಕೊಡಗು ಜಿಲ್ಲೆಯಲ್ಲಿ ಇಂದು(ಜು.25)ಸಹ ಭಾರಿ ಗಾಳಿ, ಮಳೆ ಮುಂದುವರೆದಿದ್ದು, ರಭಸದಿಂದ ಬೀಸುತ್ತಿರುವ ಗಾಳಿಗೆ ಮರಗಳು ನೆಲಕಚ್ಚುತ್ತಿದ್ದು, ಗುಡ್ಡದಿಂದ ರಸ್ತೆಗೆ ಮಣ್ಣು ಜಾರುತ್ತಿವೆ.
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಸಮೀಪದ ಜೇಡಿಗುಂಡಿ ಬಳಿ ಗುಡ್ಡದಿಂದ ರಸ್ತೆಗೆ ಮಣ್ಣು ಕುಸಿದಿದ್ದು, ಕೂದಲೆಳೆ ಅಂತರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಾರಾಗಿದೆ.
ಚಲಿಸುತ್ತಿದ್ದ ಬಸ್ ಮುಂದೆಯೇ ಗುಡ್ಡದ ಮಣ್ಣು ರಸ್ತೆಗೆ ಬಿದ್ದಿತ್ತು. ತಕ್ಷಣ ಎಚ್ಚೆತ್ತ ಬಸ್ ಚಾಲಕ ಬಸ್ ನಿಲ್ಲಿಸಿದ. ಗುಡ್ಡ ಕುಸಿತದಿಂದ ಕೆಲಕಾಲ ಸೋಮವಾರಪೇಟೆ ಶಾಂತಳ್ಳಿ ರಸ್ತೆ ಸಂಚಾರ ಕಡಿತಗೊಂಡು. ಸುಮಾರು ಒಂದು ಗಂಟೆಗೂ ಹೆಚ್ಚು ಸಾಲು ಗಟ್ಟಿ ವಾಹನಗಳು ನಿಂತಿದ್ದವು.
ಸ್ಥಳೀಯರು ಹಾಗೂ ಪಂಚಾಯತ್ ಸಿಬ್ಬಂದಿ ನೆರವಿನಿಂದ ರಸ್ತೆಗೆ ಬಿದ್ದ ಗುಡ್ಡದ ಮಣ್ಣು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.