ಮಡಿಕೇರಿ : ರಜೆಗೆ ಬಂದಿದ್ದ ಯೋಧರೊಬ್ಬ ಕಾರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪಲಿನ ಚೆನ್ನಂಗೊಲ್ಲಿ ಬಳಿ ನಡೆದಿದೆ.
ಪೊನ್ನಪ್ಪಸಂತೆಯ ಯೋಧ ಬಿದ್ದಮಾಡ ಬಿಪಿನ್ ಭೀಮಯ್ಯ (36) ಮೃತ ಯೋಧ.
ರಜೆ ಮೇರೆಗೆ ಮನೆಗೆ ಬಂದಿದ್ದ ಯೋಧ ಭೀಮಯ್ಯ, ಸ್ನೇಹಿತರ ಮದುವೆ ಸಮಾರಂಭ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ತರುವಷ್ಟರಲ್ಲಿ ಜೀವ ತೆತ್ತಿದ್ದಾರೆ.





