ಕೊಡಗು: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಕೊಡಗಿನ ಯೋಧ ದಿವಿನ್ ಎಂಬುವವರು ಮೃತ ಪಟ್ಟಿದ್ದು, ಇಂದು ಅವರ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಅಂತಿಮ ನಮನ ಸಲ್ಲಿಸಿದ್ದಾರೆ.
ಯೋಧ ದಿವಿನ್ ಅವರ ಪಾರ್ಥಿವ ದರ್ಶನಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ ವತಿಯಿಂದ ಸಕಲ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಇಂದು(ಜನವರಿ.1) ಗ್ರಾಮಸ್ಥರು, ವಿದ್ಯಾರ್ಥಿಗಳು, ಆಲೂರು ಸಿದ್ದಾಪುರ ವ್ಯಾಪ್ತಿಯ ಹಲವಾರು ಗ್ರಾಮಗಳಿಂದ ಸಾಲುಗಟ್ಟಿ ಬರುತ್ತಿದ್ದು ಅಂತಿಮ ನಮನ ಸಲ್ಲಿಸಿದ್ದಾರೆ.
ತಮ್ಮೂರ ವೀರಯೋಧನಿಗೆ ಕಂಬನಿಯ ವಿದಾಯ ಹೇಳುತ್ತಿರುವ ಗ್ರಾಮಸ್ಥರು, ದಿವಿನ್ ಅಮರ್ ರಹೇ ಎಂದು ಘೋಷಣೆಯನ್ನು ಕೂಗಿದ್ದಾರೆ. ದಿವಾನ್ ಅಂತ್ಯ ಸಂಸ್ಕಾರದ ಪ್ರಯುಕ್ತ ಆಲೂರು ಸಿದ್ದಾಪುರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಇನ್ನೂ ಕೆಲವೇ ಕ್ಷಣಗಳಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ.



