ಶನಿವಾರಸಂತೆ : ಇಲ್ಲಿನ ತ್ಯಾಗರಾಜ ಕಾಲೋನಿ ಮತ್ತು ಕೊಡ್ಲಿಪೇಟೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ ನಿವಾಸಿ ಯೋಗೀಶ್ ಹಾಗೂ ದೊಡ್ಡ ಕೊಡ್ಲಿ ನಿವಾಸಿ ಮೊಹಮ್ಮದ್ ಅಜ್ಗರ್ ಬಂದಿತ ಆರೋಪಿಗಳಾಗಿದ್ದು ಇವರ ಬಳಿಯಿಂದ 240 ಗ್ರಾಂ ಗಾಂಜಾ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಎ.ಎಸ್.ಪಿ ಡಾ. ಬೆನಕ ಪ್ರಸಾದ್, ಸೋಮವಾರಪೇಟೆ ಉಪವಿಭಾಗದ ಡಿವೈಎಸ್ಪಿ ಗಂಗಾಧರಪ್ಪ, ಶನಿವಾರ ಸಂತೆ ಠಾಣೆಯ ಪಿಎಸ್ಐ ಗಳಾದ ಗೋವಿಂದರಾಜು, ಚಂದ್ರು ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ಸಂತೆ ಹಾಗೂ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ದಂದೆ ತೆರೆಯ ಮರೆಯಲ್ಲಿ ನಡೆಯುತ್ತಿತ್ತು ಇದೀಗ ಪ್ರೊಬೆಶನರಿ ಐಪಿಎಸ್ ಅಧಿಕಾರಿ ಡಾ.ಬೆನಕ ಪ್ರಸಾದ್ ರವರ ಆಸಕ್ತಿ ಹಾಗೂ ನೇತೃತ್ವದಿಂದ ಇಬ್ಬರು ಆರೋಪಿಗಳನ್ನು ಬಂಧಿಸಿ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಲು ಮುಂದಾಗಿರುವುದನ್ನು ಇಲ್ಲಿನ ಸಾರ್ವಜನಿಕರು ಸ್ವಾಗತಿಸಿದ್ದಾರೆ.





