Mysore
24
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಸ್ಕೂಟಿ ಹಾಗೂ ಖಾಸಗಿ ಬಸ್ ಡಿಕ್ಕಿ: ಸ್ಕೂಟಿ ಸವಾರ ಸಾವು

ಕುಶಾಲನಗರ: ಸ್ಕೂಟಿ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ಸಿದ್ದಲಿಂಗಪುರದ ಬಳಿ ಜರುಗಿದೆ.

ಗ್ರಾಮದ ಕೃಷಿಕ ಶಾಂತಪ್ಪ ಎಂಬವರ ಪುತ್ರ ಎಸ್.ಎ.ಅಶೋಕ್ (64) ಮೃತ ದುರ್ದೈವಿ.

ಮೃತರು ತಮ್ಮ ಜಮೀನಿನಲ್ಲಿ ನೀರಾವರಿ ಪೈಪ್ ಅಳವಡಿಸಲು ಕಾಲರ್ ತರಲೆಂದು ತಮ್ಮ ಸ್ಕೂಟಿಯಲ್ಲಿ ಹೆಬ್ಬಾಲೆ ಕಡೆ ತೆರಳುವಾಗ ಸಿದ್ದಲಿಂಗಪುರದ ನಾಪಂಡ ಮುತ್ತಪ್ಪ ಅವರ ಮನೆಯ ಮುಂಭಾಗದ ರಸ್ತೆಯಲ್ಲಿ ಘಟನೆ ಜರುಗಿದೆ.

ಮೃತರು ಇಬ್ಬರು ಪುತ್ರರು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಈ ಸಂಬಂಧ ಕುಶಾಲನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Tags:
error: Content is protected !!