ಮಡಿಕೇರಿ: ನಾಪೊಕ್ಲು ಭಾಗಮಂಡಲ ರಸ್ತೆಯಲ್ಲಿ ತೆಪೆಕಾರ್ಯ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಕಂಡು ಬಂದು ಹಿನ್ನೆಲೆ ಗುತ್ತಿಗೆದಾರನಿಗೆ ಅಂತಿಮ ಎಚ್ಚರಿಕೆ ನೀಡಲಾಗಿದೆ.
ಭಾಗಮಂಡಲ ರಸ್ತೆಯ ದೊಡ್ಡ ಪುಲಿಕೋಟ್ ಶಾಲೆಯ ಬಳಿ ಕಾಮಗಾರಿ ಗುಣಮಟ್ಟ ಉತ್ತಮವಾಗಿಲ್ಲದಿರುವುದು ಕಂಡು ಬಂದಿದೆ. ಕೂಡಲೇ ಸ್ಥಳೀಯ ಶಾಸಕ ಎ.ಎಸ್.ಪೊನ್ನಣ್ಣ ಅವರ ಗಮನಕ್ಕೆ ತಂದು ಆಕ್ಷೇಪಣೆ ಸಲ್ಲಿಸಿದ್ದಾರೆ. ಕೂಡಲೇ ಶಾಸಕರು ಲೋಕೋಪಯೋಗಿ ಅಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಈ ಹಿನ್ನಲೆ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಗಿರೀಶ್, ಗುತ್ತಿಗೆದಾರ ಬಾಬುಗೆ ತಕ್ಷಣವೇ ಕಾಮಗಾರಿ ಸರಿಪಡಿಸಲು ಸೂಚನೆ ನೀಡಿ ಮತ್ತೆ ಲೋಪ ಕಂಡು ಬಂದಲ್ಲಿ ಬಿಲ್ ತಡೆ ಹಿಡಿಯುವ ಎಚ್ಚರಿಕೆ ನೀಡಿದ್ದಾರೆ.