ಮಾದರಿ ಕೃಷಿಕನ ಗದ್ದೆಯಲ್ಲಿ 15 ಎಕರೆ ಬೆಳೆ ನಾಶ
ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಫೆಂಗಲ್ ಚಂಡಮಾರುತದಿಂದ ನಿರಂತರ ಸುರಿದ ಮಳೆಯಿಂದ ಬೆಳೆಗಳು ಹಾನಿಯಾಗಿದೆ.
ಚಂಡಮಾರುತದ ಪರಿಣಾಮದಿಂದಾಗಿ ಪೊನ್ನಂಪೇಟೆ ಸಮೀಪದ ಹುದ್ದೂರು ಗ್ರಾಮದ ಭತ್ತದ ಬೆಳೆಯ ಮಾದರಿ ಕೃಷಿಕ ರವಿಶಂಕರ್ ಅವರ ಭತ್ತದ ಗದ್ದೆಗಳಲ್ಲಿ ಮಳೆಯಿಂದ ನೀರು ನಿಂತು 15 ಎಕರೆ ಗದ್ದೆಯಲ್ಲಿ 17 ವಿಧದ ತಳಿ ಭತ್ತದ ಪೈರು ನೀರು ಪಾಲಾಗಿದೆ.
ಅಕಾಲಿಕ ಮಳೆಯಿಂದಾಗಿ ಅಪಾರ ನಷ್ಟವನ್ನು ಕೂಡ ಇವರು ಅನುಭವಿಸಿದ್ದಾರೆ. ಕೃಷಿಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವ ಇವರು ಪ್ರತಿ ವರ್ಷ ಹೊಸ ತಳಿಯ ಅಭಿವೃದ್ಧಿಯನ್ನು ಪಡಿಸಿ ರೈತರಿಗೆ ಉಪಯುಕ್ತ ಮಾಹಿತಿಯನ್ನು ಕೂಡ ನೀಡುತ್ತಿದ್ದಾರೆ. ಇದೀಗ ಕಟಾವಿಗೆ ಬಂದ ಭತ್ತ ಮಳೆಯಿಂದಾಗಿ ಅಪಾರ ನಷ್ಟವನ್ನು ಅನುಭವಿಸಿದ್ದಾರೆ.