ಪೊನ್ನಂಪೇಟೆ : ಚೆಕ್ಕೇರ ಕುಟುಂಬ, ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಹುದಿಕೇರಿ ಜನತಾ ಪ್ರೌಢಶಾಲಾ ಮೈದಾನ ಮತ್ತು ಕಿರಿಯ ಪ್ರಾಥಮಿಕ ಶಾಲಾ ಮೈದಾನಗಳಲ್ಲಿ 41 ದಿನಗಳ ಚೆಕ್ಕೇರ ಕ್ರಿಕೆಟ್ ನಮ್ಮೆಗೆ ಇಂದು ಚಾಲನೆ ನೀಡಲಾಯಿತು.
ಕೋಣಗೇರಿ ರಸ್ತೆಯಲ್ಲಿರುವ ಜನತಾ ಪ್ರೌಡಶಾಲಾ ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಪಂದ್ಯಾವಳಿಯಲ್ಲಿ 281 ಪುರುಷರ ತಂಡ ಹಾಗೂ ಎಪ್ರಿಲ್ 28 ರಿಂದ 64 ಮಹಿಳೆಯರ ತಂಡಗಳು ಪಾಲ್ಗೊಳ್ಳುತ್ತಿವೆ.
ಉದ್ಘಾಟನಾ ಸಮಾರಂಭದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭಾಗವಹಿಸಿದರು.
ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಕ್ರೀಡೆಯು, ಮನಸ್ಸು ಹಾಗೂ ದೇಹಕ್ಕೆ ಉಲ್ಲಾಸ ನೀಡುವುದು ಮಾತ್ರವಲ್ಲದೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ವೇದಿಕೆಯೂ ಆಗಿದೆ. ಪಂದ್ಯಾಟವು ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.
ಮಹಾದೇವರ ದೇವಸ್ಥಾನದಿಂದ ಮೆರವಣಿಗೆ, ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಸ್ವಾತಂತ್ರ್ಯ ಹೋರಾಟಗಾರ ಹುಬ್ಬಳಿ ಹುಲಿ ಚೆಕ್ಕೇರ ಬಿ. ಮೊಣ್ಣಯ್ಯ ಹೆಸರಿನಲ್ಲಿ ರಸ್ತೆ ಉದ್ಘಾಟನೆ ನೆರವೇರಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಚೆಕ್ಕೇರ ಕ್ರಿಕೆಟ್ ನಮ್ಮೆ ಅಧ್ಯಕ್ಷ ಚಂದ್ರಪ್ರಕಾಶ್, ನಾಡ್ ತಕ್ಕ ಚೆಕ್ಕೇರ ರಾಜೇಶ್ ಇತರರು ಪಾಲ್ಗೊಂಡಿದ್ದರು.





