ಮಡಿಕೇರಿ : ಕೊಡಗು ಜಿಲ್ಲೆಯ ವಿವಿಧೆಡೆ ಭಾನುವಾರ ಉತ್ತಮ ಮಳೆಯಾಗಿದ್ದು, ಹವಾಮಾನ ಇಲಾಖೆ ಆ.18ರವರೆಗೆ ಆರೆಂಜ್ ಅರ್ಲಟ್ ಘೋಷಣೆ ಮಾಡಿದೆ.
ಭಾನುವಾರ ಮಡಿಕೇರಿ ನಗರ ಸೇರಿದಂತೆ ಸೋಮವಾರಪೇಟೆ, ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ ತಾಲ್ಲೂಕಿನಾದ್ಯಮತ ಉತ್ತಮ ಮಳೆಯಾಗಿದೆ. ಮಲೆಯೊಂದಿಗೆ ಬಿರುಗಾಳಿಯೂ ಬೀಸುತ್ತಿದೆ. ಈ ಹಿನ್ನೆಲೆ ಯಲ್ಲಿ ಹವಾಮಾನ ಇಲಾಖೆ ಭಾನುವಾರ ಮತ್ತು ಸೋಮವಾರದಂದು ಆರೆಂಜ್ ಅರ್ಲಟ್ ಘೋಷಣೆ ಮಾಡಿದೆ.
ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಗಳ ಅವಽಯಲ್ಲಿ ಸರಾಸರಿ ೪೪.೭೬ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ ೫೩.೬೦ ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ ಸರಾಸರಿ ೩೪.೬೦ ಮಿ.ಮೀ, ಪೊನ್ನಂಪೇಟೆ ತಾಲ್ಲೂಕಿನಲ್ಲಿ ಸರಾಸರಿ ೪೨.೨೫ ಮಿ.ಮೀ, ಸೋಮವಾರಪೇಟೆ ತಾಲ್ಲೂಕಿನಲ್ಲಿ ಸರಾಸರಿ ೬೭.೯೫ ಮಿ.ಮೀ, ಕುಶಾಲನಗರ ತಾಲ್ಲೂಕಿನಲ್ಲಿ ಸರಾಸರಿ ೨೫.೪೦ ಮಿ.ಮೀ. ಮಳೆಯಾಗಿದೆ.
ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೫೫, ನಾಪೋಕ್ಲು ೪೧.೨, ಸಂಪಾಜೆ ೭೭, ಭಾಗಮಂಡಲ ೪೧, ವಿರಾಜಪೇಟೆ ೪೧.೨, ಅಮ್ಮತ್ತಿ ೨೮, ಹುದಿಕೇರಿ ೪೧.೯, ಶ್ರೀಮಂಗಲ ೮೩, ಪೊನ್ನಂಪೇಟೆ ೨೩, ಬಾಳೆಲೆ ೨೧.೦೯, ಸೋಮವಾರಪೇಟೆ ೩೮.೨, ಶನಿವಾರಸಂತೆ ೭೬, ಶಾಂತಳ್ಳಿ ೭೫, ಕೊಡ್ಲಿಪೇಟೆ ೮೨.೬, ಕುಶಾಲನಗರ ೧೬.೮, ಸುಂಟಿಕೊಪ್ಪ ೩೪ ಮಿ.ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳಿದ್ದು, ೨,೮೫೭.೨೦ ಅಡಿ ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಒಳಹರಿವು ೮,೭೨೮ ಕ್ಯುಸೆಕ್ಸ್ ಇದ್ದು, ಹೊರ ಹರಿವು ನದಿಗೆ ೭,೮೧೨ ಕ್ಯುಸೆಕ್ಸ್, ನಾಲೆಗೆ ೫೦೦ ಕ್ಯುಸೆಕ್ಸ್ ಬಿಡಲಾಗುತ್ತಿದೆ.





