Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕೊಡಗಿನಲ್ಲಿ ಇನ್ಮುಂದೆ ಜಲಪಾತಗಳಿಗೆ ಇಳಿಯುವಂತಿಲ್ಲ: ಯಾಕೆ ಗೊತ್ತಾ?

ಕೊಡಗು: ಕರ್ನಾಟಕದ ಕಾಶ್ಮೀರಾ ಕೊಡಗಿಗೆ ಮಳೆಗಾಲದಲ್ಲಿ ಎಲ್ಲಿಲ್ಲದ ಜನ ಬರುತ್ತಾರೆ. ಕೊಡಗಿನ ರಮಣೀಯ ಸೌಂದರ್ಯವನ್ನು ಸವಿಯುವ ಮೂಲಕ ಅಲ್ಲಿ ಮೈದುಂಬಿ ಹರಿಯುವ ನದಿ ತೊರೆ, ತೀರಗಳನ್ನು ಒಮ್ಮೆಲೆ ನೋಡಲು ಜನ ಸಾಗರವೇ ಉಕ್ಕಿ ಬರುವುದುಂಟು. ಝರಿಯಾಗಿ ಹರಿಯುವ ಹಲವು ತೊರೆ, ಜಲಪಾತಗಳಿಂದ ದುಮ್ಮಿಕ್ಕುವ ನೀರಿಗೆ ಮೈವೊಡ್ಡಿ ಸ್ನಾನ ಮಾಡಲು ಪ್ರವಾಸಿಗರು ಕೊಡಗಿಗೆ ಬರುತ್ತಾರೆ.

ಆದರೆ ಇನ್ಮುಂದೆ ಕೊಡಗಿನಲ್ಲಿರುವ ಯಾವುದೇ ಜಲಪಾತಗಳಿಗೆ ಪ್ರವಾಸಿಗರು ಇಳಿಯುವಂತಿಲ್ಲ. ಹೌದು ಇದು ಕೊಡಗು ಜಿಲ್ಲಾಡಳಿತ ಕೈಗೊಂಡಿರುವ ಕ್ರಮವಾಗಿದೆ. ಜಿಲ್ಲೆಯಲ್ಲಿ ಯಾವುದೇ ಜಲಪಾತ, ನದಿ ತೊರೆ, ಝರಿಗಳಿಗೆ ಇಳಿದು ಸ್ನಾನ ಮಾಡದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆ ಮೂಲಕ ಎಂಜಾಯ್ ಮಾಡಲು ಕೊಡಗಿಗೆ ಬರುವ ಪ್ರವಾಸಿಗರ ಆಸೆಗೆ ತಣ್ಣೀರೆರೆಚಿದ ಹಾಗಾಗಿದೆ.

ಕೊಡಗಿನಲ್ಲಿ ನದಿ, ಜಲಪಾತಗಳಿಗೆ ಇಳಿದು ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಸಂಖ್ಯೆ ಏರಿಕೆ ಕಾಣುತ್ತಿರುವ ಹಿನ್ನೆಲೆ, ಸಾರ್ವಜನಿಕ ಕೆರೆಗಳು ಸೇರಿದಂತೆ ಎಲ್ಲಿಯೂ ಸ್ನಾನ ಮಾಡದಂತೆ ಜಿಲ್ಲಾಧಿಕಾರಿ ಡಾ.ವೆಂಕಟ್‌ ರಾಜಾ ಆದೇಶ ಹೊರಡಿಸಿದ್ದಾರೆ.

Tags: