Mysore
20
overcast clouds
Light
Dark

ಕೊಡಗಿನಲ್ಲಿ ವಿಕೋಪ ನಿರ್ವಹಣೆಗೆ ಎನ್‌ಡಿಆರ್‌ಎಫ್‌ ಸಜ್ಜು

ಮಡಿಕೇರಿ: ಕೊಡಗು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸಿದೆ. ಸದ್ಯ ಕಳದೆರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಕ್ಷೀಣಿಸಿದ್ದು, ಆಗೊಮ್ಮೆ ಹಿಗೊಮ್ಮೆ ಬಿಸಿಲಿನ ವಾತವರಣ ಕಂಡುಬರುತ್ತಿದ್ದು, ಸಾಧಾರಣ ಮಳೆಯಾಗುತ್ತಿದೆ.

ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ವಿಪತ್ತು ನಿರ್ವಹಣೆಗೆ ಎನ್‌ಡಿಆರ್‌ಎಫ್‌ ತಂಡ ಸಜ್ಜಾಗಿದ್ದು, ಜಿಲ್ಲೆಯ ಸುತ್ತಮುತ್ತ ಭೂಕುಸಿತ ಉಂಟಾಗುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

ಜಿಲ್ಲೆಯಲ್ಲಿ ಮಳೆ ಕ್ಷೀಣಿಸಿದ್ದು, ಜು.11 ರಂದು 3.03 ಮಿ.ಮೀ ಮಳೆಯಾಗಿದ್ದು, ಶುಕ್ರವಾರ(ಜು.12) ಹಾಗೂ ಶನಿವಾರವೂ(ಜು.13) ಹೆಚ್ಚಿನ ಮಳೆಯಾಗಲಿಲ್ಲ. ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ ಹಾಗೂ ಸೋಮವಾರಪೇಟೆಯಲ್ಲಿ ಆಗೊಮ್ಮೆ ಹಿಗೊಮ್ಮೆ ಸೂರ್ಯ ಭೂಮಿಯನ್ನು ಸ್ಪರ್ಶಿಸುತ್ತಿದ್ದಾನೆ. ಉಳಿದ ಸಮಯ ಮೋಡ ಕವಿದ ವಾತವಾರಣದೊಂದಿಗೆ ಸಾಮಾನ್ಯ ಮಳೆಯಾಗುತ್ತಿದೆ.

ಜಿಲ್ಲೆಯಲ್ಲಿ ಬಿಡುಬಿಟ್ಟ ಎನ್‌ಡಿಆರ್‌ಎಫ್‌ ತಂಡ ಹಿಂದೆ ಭೂಕುಸಿತ ಉಂಟಾದ ಹಾಗೂ ಭೂಕುಸಿತದ ಅಪಾಯವಿರುವ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದೆ. ಭೂಕುಸಿತ ಹಾಗೂ ಜಲ ಸ್ಫೋಟದಂತಹ ವಿಪತ್ತು ಸಂಭವಿಸಿದರೆ, ಜನ ಜಾನುವಾರು ರಕ್ಷಣೆಗೆ ಹೇಗೆ ಕ್ರಮಕೈಗೊಳ್ಳಬೇಕು ಎಂದು ತಂಡದಲ್ಲಿರುವ ಪರಿಣಿತರಿಂದ ಮಾಹಿತಿ ಪಡೆದು ಸಿದ್ಧರಾಗುತ್ತಿದ್ದಾರೆ. ಕೆಲವೆಡೆ ಪ್ರಾತ್ಯಕ್ಷೆಕೆಯನ್ನೂ ಸಹ ನಡೆಸುತ್ತಿದೆ.