ನಾಪೋಕ್ಲು: ಆಕಸ್ಮಿಕವಾಗಿ ಬೆಂಕಿ ತಗುಲಿ ಭತ್ತ ಹಾಗೂ ಹುಲ್ಲು ಸುಟ್ಟಿಹೋಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಘಟನೆ ಕೈಕಾಡು ಗ್ರಾಮದಲ್ಲಿ ನಡೆದಿದೆ.
ಯಂತ್ರದ ಸಹಾಯದಿಂದ ಭಾನುವಾರ ಸಂಜೆ ಗ್ರಾಮದ ಮಾಜಿ ಸೈನಿಕ ಕುಲ್ಲಚೆಟ್ಟಿ ನಾಣಯ್ಯ ಎಂಬವರ ಮನೆಯಂಗಳದಲ್ಲಿ ಕಾರ್ಮಿಕರು ಭತ್ತ ಒಕ್ಕಲು ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಅಪಾರ ಪ್ರಮಾಣದ ಭತ್ತ ಮತ್ತು ಹುಲ್ಲು ನಾಶವಾಗಿದೆ. ಜೊತೆಗೆ ಶೆಡ್‌ನಲ್ಲಿದ್ದ ಕಾರು ಕೂಡ ಬೆಂಕಿಯಿಂದ ಹಾನಿಗೊಳಗಾಗಿದೆ. ತಕ್ಷಣ ಮಾಹಿತಿ ತಿಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿ ಹೆಚ್ಚಿನ ಅಪಾಯವನ್ನು ತಪ್ಪಿಸಿದರು.





