ಮಡಿಕೇರಿ: ಕೊಡವ ಹಾಕಿ ಅಕಾಡೆಮಿಯ ಸಹಭಾಗಿತ್ವದಲ್ಲಿ ಕೊಡವ ಕುಟುಂಬಗಳ ನಡುವೆ ವರ್ಷಂಪ್ರತಿ ನಡೆಯುವ ಕೊಡವ ಹಾಕಿ ನಮ್ಮೆ ಈ ವರ್ಷ ಬೆಳ್ಳಿ ಮಹೋತ್ಸವ ಆಚರಿಸುತ್ತಿದೆ. 2025ನೇ ಸಾಲಿನ ಹಾಕಿ ಉತ್ಸವದ ಆತಿಥ್ಯವನ್ನು ಮುದ್ದಂಡ ಕುಟುಂಬಸ್ಥರು ವಹಿಸಿಕೊಂಡಿದ್ದು, ಈಗಾಗಲೇ ಸಕಲ ಸಿದ್ಧತೆ ನಡೆಸಲಾಗುತ್ತಿದೆ.
ಈ ಬಾರಿ ಮುದ್ದಂಡ ಹಾಕಿ ಹಬ್ಬ ಮಾರ್ಚ್.28 ರಿಂದ ಆರಂಭಗೊಂಡು, ಏಪ್ರಿಲ್.27ರವರೆಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ಹಾಗೂ ಪೊಲೀಸ್ ಕವಾಯತ್ತು ಮೈದಾನದಲ್ಲಿ ನಡೆಯಲಿದೆ. ವಿಶ್ವ ಪ್ರಸಿದ್ಧ ಹಾಕಿ ಉತ್ಸವದ ನೋಂದಣಿ ಪ್ರಕ್ರಿಯೆಯು ಮಾರ್ಚ್.18ಕ್ಕೆ ಕೊನೆಗೊಂಡಿದ್ದು, 25ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ದಾಖಲೆಯ 396 ಕುಟುಂಬಗಳು ನೋಂದಣಿಗೊಂಡಿವೆ.
ಮಡಿಕೇರಿಯಲ್ಲಿ ಮೂರನೇ ಬಾರಿಗೆ ಆಯೋಜನೆಗೊಳ್ಳುತ್ತಿರುವ ಕೊಡವ ಹಾಕಿ ಉತ್ಸವದಲ್ಲಿ ದಾಖಲೆಯ 396 ಕೊಡವ ಕುಟುಂಬ ತಂಡಗಳ ನೋಂದಣಿಗೆ ಸಹಕರಿಸಿದ ಎಲ್ಲಾರಿಗೂ ಮುದ್ದಂಡ ಕುಟುಂಬ ಧನ್ಯವಾದಗಳನ್ನು ಅರ್ಪಿಸಿದೆ.