ಕುಶಾಲನಗರ: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಮಾಜಿ ಸೈನಿಕ ಗಿರೀಶ್ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.
ಚೆಟ್ಟಳ್ಳಿ ನಿವಾಸಿ ಗಿರೀಶ್ ಮೂರು ದಿನದ ಹಿಂದೆ ನಾಪತ್ತೆಯಾಗಿದ್ದರು. ಇವರ ಬೈಕ್ ಕುಶಾಲನಗರದ ತೆಪ್ಪದಕಂಡಿ ಬಳಿ ಪತ್ತೆಯಾಗಿತ್ತು. ತೆಪ್ಪದಕಂಡಿ ಬಳಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಕುಶಾಲನಗರ ಟೌನ್ ಠಾಣೆ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ, ಎನ್‌ಡಿಆರ್‌ಎಫ್ ಸಿಬ್ಬಂದಿ ಜೊತೆ ಹುಡುಕಾಟ ನಡೆಸಿದ್ದರು. ಇಂದು ನಿಸರ್ಗಧಾಮ ಬಳಿಯ ಕಾವೇರಿ ನದಿಯಲ್ಲಿ ಗಿರೀಶ್ ಮೃತದೇಹ ಪತ್ತೆಯಾಗಿದೆ.





