Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಭಾರೀ ಮಳೆ ಎಫೆಕ್ಟ್ ; ಕೊಡಗು ಜಿಲ್ಲೆಯ ಹಲವು ಹೆದ್ದಾರಿಗಳು ಬಂದ್

ಕೊಡಗು : ಕಳೆದ ೧೫ ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಕಾವೇರಿ ನದಿ ಪ್ರವಾಹದಿಂದ ಮಡಿಕೇರಿ ತಾಲೂಕಿನ ಹಲವೆಡೆ ಅವಾಂತರಗಳು ಸೃಷ್ಠಿಯಾಗಿವೆ. ಪ್ರವಾಹದಿಂದ ರಾಜ್ಯದ ಹಲವು ರಾಜ್ಯ ಹೆದ್ದಾರಿಗಳು ಬಂದ್‌ ಆಗಿವೆ.

ನಾಪೋಕ್ಲು-ಚೆರಿಯಪರಂಬು, ನಾಪೋಕ್ಲು ಹೊದವಾಡ-ಬೊಳಿಬಾಣೆ ರಸ್ತೆ ಜಲಾವೃತಗೊಂಡಿದೆ. ಇದರಿಂದಾಗಿ ಅಕ್ಕಪಕ್ಕದ ಊರಿಗೆ ತೆರಳಲು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಲ್ಲಿ ರಸ್ತೆ ದಾಟಲು ಸಹ ವಾಹನ ಸವಾರರು ಸಹಾಸ ಮಾಡುವಂತ ಪರಿಸ್ಥಿತಿ ಇದೆ.

ಇನ್ನು ಜೋರು ಗಾಳಿ ಮಳೆಯಿಂದಾಗಿ ವಿರಾಜಪೇಟೆ ತಾಲೂಕಿನ ಹಾತೂರು ಗ್ರಾಮದ ಬಳಿ ಬೃಹತ್‌ ಮರ ಹೆದ್ದಾರಿ ಮೇಲೆಬಿದ್ದಿದ್ದು, ವಿರಾಜಪೇಟೆ-ಗೋಣಿಕೊಪ್ಪಲಿ ರಸ್ತೆ ಸಂಪರ್ಕ ಕಡಿತವಾಗಿದೆ. ಅರಣ್ಯ ಇಲಾಖೆಯಿಂದ ಮರ ತೆರವು ಕಾರ್ಯ ನಡೆಯುತ್ತಿದೆ.

ಮತ್ತೊಂದು ಕಡೆ ಅಪಾರವಾದ ಮಳೆಯಿಂದ ಜಿಲ್ಲೆಯಲ್ಲಿರುವ ಜಲಪಾತಗಳು ಭೋರ್ಗರೆಯುತ್ತಿವೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಯಾವುದೇ ಜಲಪಾತಗಳಿಗೆ ಇಳಿದು ಸ್ನಾನ ಮಾಡುವುದು ಹಾಗೂ ನದಿ-ತೊರೆಗಳು ಝರಿಗಳು ಸಾರ್ವಜನಿಕ ಕೆರೆಗಳಲ್ಲೂ ಸ್ನಾನ ಮಾಡುವುದನ್ನ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

Tags: