ಮಡಿಕೇರಿ : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಕ್ರಕ್ಕೆ ತಲೆಕೊಟ್ಟು ವ್ಯಕ್ತೊಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ರಾತ್ರಿ ಕುಶಾಲನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮೃತರನ್ನು ಸೋಮವಾರಪೇಟೆ ಶಾಂತಳ್ಳಿ ಗ್ರಾಮದ ಸೋಮಶೇಖರ್ (45) ಎಂದು ಗುರುತಿಸಲಾಗಿದೆ. ಈತ ಸೋಮವಾರಪೇಟೆ ಬಾರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅವಿವಾಹಿತನಾಗಿದ್ದ ಎಂದು ಹೇಳಲಾಗಿದೆ.
ಕಳೆದ ಒಂದು ವಾರದಿಂದ ಕುಶಾಲನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಈತ ತಂಗುತ್ತಿದ್ದ. ಗುರುವಾರ ಸಂಜೆ ನಿಲ್ದಾಣಕ್ಕೆ ಬರುತ್ತಿದ್ದ ಬಸ್ ಮುಂದೆ ಬೀಳಲು ಪ್ರಯತ್ನ ನಡೆಸಿ ವಿಫಲಗೊಂಡಿದ್ದ.
ಇಂದಿರಾ ಕ್ಯಾಂಟಿನ್ ಮುಂಭಾಗ ರಾತ್ರಿ 8 ಗಂಟೆಗೆ ಮತ್ತೆ ಈತ ಬಸ್ ಕೆಳಗೆ ಹಾರಿ ಜೀವ ಕಳೆದುಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





