ಮಡಿಕೇರಿ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಬೀದಿ ನಾಯಿಗಳಿಂದ ತೀವ್ರ ಕಿರಿ ಕಿರಿ ಉಂಟಾಗುತ್ತಿದ್ದು, ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ನಾಯಿಗಳು ತೀವ್ರ ತೊಂದರೆ ಕೊಡುತ್ತಿವೆ.
ರಸ್ತೆ ಬಳಿ ನಿಲ್ಲಿಸುವ ವಾಹನಗಳ ಮೇಲೆಯೇ ಬೀದಿ ನಾಯಿಗಳು ಕುಳಿತುಕೊಳ್ಳುತ್ತಿದ್ದು, ಸವಾರರಿಗೆ ಕಿರಿ ಕಿರಿ ಉಂಟುಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ನಗರಸಭಾ ಅಧಿಕಾರಿಗಳು ತಕ್ಷಣ ಬೀದಿ ನಾಯಿಗಳ ಹಾವಳಿಯನ್ನು ತಡೆಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





