ಮಡಿಕೇರಿ : ಪೊನ್ನಂಪೇಟೆ ತಾಲೂಕಿನ ಕಾನೂರುವಿನಿಂದ ಕುಟ್ಟಕ್ಕೆ ತೆರಳುವ ರಸ್ತೆಯ ನಾಲ್ಕೇರಿಯಲ್ಲಿ ಕಾರು ಅಪಘಾತವಾಗಿದ್ದು, ಮೂವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಎಲ್ಲರೂ ಪ್ರಾಣಪಾಯದಿಂದ ಪರಾಗಿದ್ದಾರೆ.
ಕಾರು ಕೇರಳ ನೋಂದಣಿಯದ್ದಾಗಿದೆ. ಸ್ಥಳೀಯರು ಪ್ರಯಾಣಿಕರನ್ನು ಕಾರಿನಿಂದ ಹೊರಗೆ ತೆಗೆಯಲು ಸಹಕರಿಸಿದ್ದಾರೆ.
ಈ ರಸ್ತೆಯಲ್ಲಿ ಕೇರಳ ರಾಜ್ಯದ ವಾಹನಗಳು ಅತಿ ವೇಗವಾಗಿ ಹೋಗುತ್ತವೆ. ಪೊಲೀಸರು ವೇಗ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.





