Mysore
29
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಈ ಬಾರಿಯ ಮಡಿಕೇರಿ ದಸರಾದಲ್ಲಿ ಜನಾರ್ಕಷಣೆ ಕಾರ್ಯಕ್ರಮ: 9ದಿನಗಳ ಪಟ್ಟಿ ಹೀಗಿದೆ

ಮಡಿಕೇರಿ : ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ಅಕ್ಟೋಬರ್ 4 ರಂದು 12 ರವರೆಗೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿದೆ.

ಜಿಲ್ಲಾಧಿಕಾರಿ ವೆಂಕಟರಾಜಾ ಅಧ್ಯಕ್ಷತೆಯಲ್ಲಿ ನಡೆದ ಮಡಿಕೇರಿ ನಗರ ದಸರಾ ಸಮಿತಿ ಪ್ರಮುಖರ ಸಭೆಯಲ್ಲಿ ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಸಾಂಸ್ಕøತಿಕ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಅ.4 ರಂದು ಸಂಜೆ 6 ಗಂಟೆಗೆ ಗಾಂಧಿ ಮೈದಾನದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಅ. 5 ರಂದು ಬೆಳಗ್ಗೆ 9.30 ಗಂಟೆಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ 11 ನೇ ವರ್ಷದ ಮಕ್ಕಳ ದಸರಾ ಅಂಗವಾಗಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಛದ್ಮವೇಷ ಕ್ಲೇಮಾಡೆಲಿಂಗ್ ಸ್ಪರ್ಧೆಗಳು ಆಯೋಜಿತವಾಗಿದೆ, ಅಂದು ಸಂಜೆ 6 ಗಂಟೆಯಿಂದ ಮಕ್ಕಳಿಂದಲೇ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.

ಅಕ್ಟೋಬರ್ 6 ರಂದು ಬೆಳಗ್ಗೆ 10 ಗಂಟೆಗೆ ಮೊದಲ ವರ್ಷದ ಕಾಫಿ ದಸರಾ ಚಾಲನೆಗೊಳ್ಳಲಿದೆ. ಕಾಫಿ ಮಂಡಳಿ, ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕಾ ಇಲಾಖೆ, ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾಫಿ ದಸರಾ ಆಯೋಜಿತವಾಗಿದೆ, ಕಾಫಿ ದಸರಾ ಪ್ರಯುಕ್ತ ನಿರ್ಮಾಣಗೊಳ್ಳುವ 31 ಮಳಿಗೆಗಳಲ್ಲಿ ಕಾಫಿ, ಕೃಷಿ ಸಂಬಂಧಿತ ಪ್ರದರ್ಶನ, ಮಾರಾಟ ಮೇಳ ಇರಲಿದೆ, 11 ಗಂಟೆಯಿಂದ ಕಲಾ ಸಂಭ್ರಮ ವೇದಿಕೆಯಲ್ಲಿ ಕಾಫಿ ಮತ್ತು ಕೃಷಿ ಸಂಬಂಧಿತ ಪರಿಣಿತರಿಂದ ವಿಚಾರಸಂಕಿರಣ ಆಯೋಜಿತವಾಗಿದೆ, ಸಂಜೆ 5 ಗಂಟೆಯವರೆಗೆ ಮಳಿಗೆಗಳು ಸಾರ್ವಜನಿಕರ ಭೇಟಿಗೆ ತೆರೆದಿರುತ್ತದೆ, ಸಂಜೆ 6 ಗಂಟೆಯಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜಿತವಾಗಿದೆ.

ಅಕ್ಟೋಬರ್ 7 ರಂದು ಬೆಳಗ್ಗೆ 10 ಗಂಟೆಯಿಂದ ಕಾಫಿ ದಸರಾ ಅಂಗವಾಗಿ ವಿವಿಧ ಮಳಿಗೆಗಳು ಸಂಜೆ 5 ಗಂಟೆಯವರೆಗೆ ತೆರೆದಿರುತ್ತವೆ, ಬೆಳಗ್ಗೆ 10 ಗಂಟೆಯಿಂದ ಕಾಫಿ ಕೃಷಿ ಸಂಬಂಧಿತ ವಿಚಾರಸಂಕಿರಣಗಳು ಆಯೋಜಿಸಲ್ಪಟ್ಟಿದೆ, ಕಾಫಿ ದಸರಾವನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತಿದೆ ಎಂದು ಅನಿಲ್ ಸಭೆಗೆ ಮಾಹಿತಿ ನೀಡಿದರು. ಅಂದು ಸಂಜೆ 6 ಗಂಟೆಯಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.

ಅ.8 ರಂದು ಮಂಗಳವಾರ 7 ನೇ ವರ್ಷದ ಮಹಿಳಾ ದಸರಾ ನಡೆಯಲಿದ್ದು, ವೈವಿಧ್ಯಮಯ ಮನರಂಜನಾ ಸ್ಪರ್ಧೆಗಳು ಮಹಿಳೆಯರಿಗಾಗಿ ಆಯೋಜಿತವಾಗಿದ್ದು, ಮಡಿಕೇರಿ ನಗರಸಭಾ ಸದಸ್ಯೆಯರು, ಕೊಡಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಹಿಳಾ ದಸರಾ ಆಯೋಜಿಸಲ್ಪಟ್ಟಿದೆ, ಸಂಜೆ 6 ಗಂಟೆಗೆ ಮಹಿಳೆಯರಿಂದಲೇ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.

ಅ.9 ರಂದು ಸಂಜೆ 6 ಗಂಟೆಯಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.

ಅ 10 ರಂದು ಬೆಳಗ್ಗೆ 9 ಗಂಟೆಗೆ ಕೊಡಗು ಜಿಲ್ಲಾ ಜಾನಪದ ಪರಿಷತ್ ಸಹಯೋಗದಲ್ಲಿ ಜಾನಪದ ದಸರಾ ಆಯೋಜಿಸಲಾಗಿದ್ದು, ಕಲಾಜಾಥಾ, ವೈವಿಧ್ಯಮಯ ಜಾನಪದ ಕಲಾ ತಂಡಗಳ ಪ್ರದರ್ಶನ ಆಯೋಜಿತವಾಗಿದೆ, ಸಂಜೆ 6 ಗಂಟೆಗೆ ಸೋಮು ಮತ್ತು ಅಜ್ಜೇಟಿರ ಲೋಕೇಶ್ ಸಂಚಾಲಕತ್ವದಲ್ಲಿ ಯುವ ದಸರಾ ಆಯೋಜಿತವಾಗಿದೆ.

ಅ.11 ರಂದು ಆಯುಧಪೂಜಾ ಪ್ರಯುಕ್ತ ಸಂಜೆ 7 ಗಂಟೆಗೆ ರಾಜ್ಯದ ಹೆಸರಾಂತ ಗಾಯಕರಾದ ಅರ್ಜುನ್ ಜನ್ಯ ಮತ್ತು ರಾಜೇಶ್ ಕೃಷ್ಣನ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿತವಾಗಿದೆ,
ಅ.12 ರಂದು ವಿಜಯದಶಮಿ ಹಿನ್ನೆಲೆಯಲ್ಲಿ 7 ಗಂಟೆಯಿಂದ 10 ಗಂಟೆಯವರೆಗೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ, ರಾತ್ರಿ 10 ಗಂಟೆಯಿಂದ ಮರುದಿನ ಬೆಳಗ್ಗಿನ ಜಾವದವರೆಗೆ ರಾಜ್ಯದ ಹೆಸರಾಂತ ಸಂಗೀತ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ,
ಕಾರ್ಯಕ್ರಮ ನೀಡುವ ಕಲಾತಂಡಗಳು, ಕಲಾವಿದರಿಗೆ ಅಗತ್ಯ ಸೌಲಭ್ಯ ನೀಡುವಂತೆ ಜಿಲ್ಲಾಧಿಕಾರಿ ವೆಂಕಟರಾಜಾ ಸೂಚಿಸಿದರು.

ದಸರಾ ಕವಿಗೋಷ್ಟಿ: ಅ.9 ರಂದು 60 ಕವಿಗಳು ಕವನ ವಾಚಿಸಲಿರುವ ದಸರಾ ಬಹುಭಾμÁ ಕವಿಗೋಷ್ಠಿ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ದಸರಾ ಬಹುಭಾμÁ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಮಾಹಿತಿ ನೀಡಿದರು.

ವಾಚಿಸಲ್ಪಡುವ ಕವನಗಳನ್ನು ಪುಸ್ತಕರೂಪದಲ್ಲಿ ಸಂಕಲವನಾಗಿ ಪ್ರಕಟಿಸಲಾಗುತ್ತದೆ, 200 ಅಧಿಕ ಕವನಗಳು ಆಯ್ಕೆ ಪ್ರಕ್ರಿಯೆಗೆ ಬಂದಿದ್ದವು, ಈ ಪೈಕಿ 60 ಕವಿತೆಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ದಸರಾ ಕ್ರೀಡಾಕೂಟ –ಅ.5 ರಂದು ಬೆಳಗ್ಗೆ 7 ಗಂಟೆಗೆ ರಸ್ತೆ ಓಟ, ಜಿಲ್ಲಾ ಕ್ರೀಡಾಂಗಣದಲ್ಲಿ ಫುಟ್ಬಾಲ್ ಮತ್ತು ಬಾಸ್ಕೆಟ್ ಬಾಲ್ ಕ್ರೀಡೆಗಳು ಆಯೋಜಿತವಾಗಿದೆ, ಅ.6 ರಂದು ಬೆಳಗ್ಗೆ 7 ಗಂಟೆಗೆ ನಗರದ ಬನ್ನಿಮಂಟಪದಿಂದ ಕ್ರೀಡಾಜ್ಯೋತಿಯನ್ನು ತಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ತರಲಾಗುತ್ತದೆ, ಅಂದು ಇಡೀ ದಿನ ವಾಲಿಬಾಲ್, ಮಕ್ಕಳ ಕ್ರೀಡಾಕೂಟ ಆಯೋಜಿತವಾಗಿದೆ.

ಅ.9 ರಂದು ಹೋಟೆಲ್ ರಾಜದರ್ಶನ್ ನಲ್ಲಿ ಚೆಸ್ ಮತ್ತು ಕೇರಂಬೋರ್ಡ್ ಸ್ಪರ್ಧೆಗಳು ಆಯೋಜಿತವಾಗಿದೆ. ಅ.10 ರಂದು ನಗರದ ಗಾಂಧಿ ಮೈದಾನದಲ್ಲಿ ಕಬ್ಬಡ್ಡಿ ಸ್ಪರ್ಧೆ ಆಯೋಜಿತವಾಗಿದೆ ಎಂದು ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ ಮಾಹಿತಿ ನೀಡಿದ್ದಾರೆ.

ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ.ವೈ, ಖಜಾಂಜಿ ಅರುಣ್ ಶೆಟ್ಟಿ ಸೇರಿದಂತೆ ದಸರಾ ಸಮಿತಿ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.

Tags: