Mysore
24
haze

Social Media

ಶನಿವಾರ, 27 ಡಿಸೆಂಬರ್ 2025
Light
Dark

ಮಡಿಕೇರಿ, ಗೋಣಿಕೊಪ್ಪದಲ್ಲಿ ಸಂಭ್ರಮದ ದಸರಾ ಆಚರಣೆ: ಸಚಿವ ಬೋಸರಾಜು ಹೇಳಿದ್ದಿಷ್ಟು

ಮಡಿಕೇರಿ: ಮಡಿಕೇರಿ, ಗೋಣಿಕೊಪ್ಪದಲ್ಲಿ ಸಂಭ್ರಮದ ದಸರಾ ಆಚರಣೆ ಮಾಡುವುದಾಗಿ ಸಚಿವ ಬೋಸರಾಜು ಹೇಳಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ದಸರಾ ಆಚರಣೆಗೆ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ತನ್ನದೇ ಇತಿಹಾಸ ಹೊಂದಿದ್ದು, ದೇಶ ವಿದೇಶದ ಮಟ್ಟದಲ್ಲಿ ಬಹಳ ಖ್ಯಾತಿಯನ್ನು ಹೊಂದಿದೆ.

ಈ ಬಾರಿಯ ಮಡಿಕೇರಿ-ಗೋಣಿಕೊಪ್ಪ ದಸರಾವನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ಅಗತ್ಯ ತಯಾರಿ ಮಾಡಿಕೊಳ್ಳಬೇಕು.

ಸರ್ಕಾರದ ವತಿಯಿಂದ ಹಿಂದಿನ ಬಾರಿಗಿಂತಲೂ ಹೆಚ್ಚಿನ ಅನುದಾನ ದೊರಕಿಸಿ ಕೊಡಲು ನಾವೆಲ್ಲರೂ ಪ್ರಯತ್ನ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು.

ದಸರಾ ಆಚರಣೆಗೆ ಎಲ್ಲರೂ ಸಿದ್ಧರಾಗುವಂತೆ ಹೇಳಿದ ಸಚಿವರು, ರಸ್ತೆಗಳ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಡಿಕೇರಿ ದಸರಾಗೆ ಸುಮಾರು ನಾಲ್ಕು ಲಕ್ಷ ಜನರು ಜಿಲ್ಲೆಗೆ ಭೇಟಿ ನೀಡಲಿದ್ದು, ಯಾರಿಗೂ ಏನೂ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದರು.

 

Tags:
error: Content is protected !!