Mysore
34
few clouds

Social Media

ಗುರುವಾರ, 09 ಏಪ್ರಿಲ 2026
Light
Dark

ಅಕ್ಟೋಬರ್‌.4ರಿಂದ 12ರವರೆಗೆ ಮಡಿಕೇರಿ ದಸರಾ: ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ

ಮಡಿಕೇರಿ: ಅಕ್ಟೋಬರ್‌.4ರಿಂದ 12ರವರೆಗೆ ಮಡಿಕೇರಿ ದಸರಾ ನಡೆಯಲಿದ್ದು, ಕಾರ್ಯಕ್ರಮಗಳಿಗೆ ಭಾಗವಹಿಸಲು ಕಲಾವಿದರಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅಕ್ಟೋಬರ್.‌4 ರಿಂದ 12ರವರೆಗೆ ನಗರದ ಗಾಂಧಿ ಮೈದಾನದಲ್ಲಿ ಆಯೋಜಿತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರು, ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕಲಾವಿದರು, ಕಲಾತಂಡಗಳು ಸೆಪ್ಟೆಂಬರ್‌ 2ರ ಒಳಗಾಗಿ ಅರ್ಜಿ ಮಾಹಿತಿಯನ್ನು ಮೇಲ್‌ ಮಾಡುವಂತೆ ಸೂಚಿಸಲಾಗಿದೆ.

ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಶೀಲಿಸಲಾಗುವುದಿಲ್ಲ ಎಂದು ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್‌ ಎಚ್.ಟಿ ತಿಳಿಸಿದ್ದಾರೆ.

ಮಹಿಳಾ ದಸರಾ, ಮಕ್ಕಳ ದಸರಾ, ಜಾನಪದ ದಸರಾಗಳಿಗೆ ಕಾರ್ಯಕ್ರಮ ನೀಡುವವರು ಅರ್ಜಿಯಲ್ಲಿ ಈ ಬಗ್ಗೆ ನಮೂದಿಸಬೇಕು. ಒಂದು ಕಲಾತಂಡಕ್ಕೆ ಒಂದು ಪ್ರದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಸೋಲೋ ನೃತ್ಯ ಹಾಗೂ ಸೋಲೋ ಹಾಡಿಗೆ ಅವಕಾಶವಿಲ್ಲ. ನೃತ್ಯತಂಡದಲ್ಲಿ ಕನಿಷ್ಠ 4 ಮಂದಿ ಇರಬೇಕು. ಕಲಾವಿದರ ಆಯ್ಕೆಯ ಅಂತಿಮ ತೀರ್ಮಾನ ದಸರಾ ಸಾಂಸ್ಕೃತಿಕ ಸಮಿತಿಯದ್ದಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

 

Tags:
error: Content is protected !!