ಮಡಿಕೇರಿ: ಮಂಗಳೂರು ರಸ್ತೆ ಕಾಟಕೇರಿಯಲ್ಲಿ ಪ್ರಶಾಂತಿ ಹೋಂ ಸ್ಟೇ ಎದುರು ಭೀಕರ ರಸ್ತೆ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಬೈಕ್ ಸವಾರ ಕಕ್ಕಬೆ ನಿವಾಸಿ ಶರತ್ (28) ಎಂದು ಗುರುತಿಸಲಾಗಿದೆ.
ಕಾರನ್ನು ಹಿಂದಿಕ್ಕಿ ಹೋಗುತ್ತಿದ್ದಾಗ ಲಾರಿ ಅಡಿಗೆ ಬಿದ್ದ ಯುವಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.