Mysore
16
mist

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಮಡಿಕೇರಿ: ಬೆಳಕಿನ ದಸರೆ ಆರಂಭ

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಶೋಭಾಯಾತ್ರೆ ಇಂದು ರಾತ್ರಿ 10 ಗಂಟೆಗೆ ಆರಂಭವಾಗಿದ್ದು, ಮುಂಜಾನೆವರೆಗೆ ಯಾತ್ರೆ ನಡೆಯಲಿದೆ. ಈ ಮೂಲಕ ನವರಾತ್ರಿಯ ಉತ್ಸವಕ್ಕೆ ಸಂಭ್ರಮದ ತೆರೆ ಬೀಳಲಿದೆ.

ಮೈಸೂರು ದಸರಾಗೆ ತೆರೆ ಬೀಳುತ್ತಿದ್ದಂತೆ ಇತ್ತ ಬೆಳಕಿನ ದಸರಾ ಎಂದೇ ಹೆಸರಾದ ಮಡಿಕೇರಿ ದಸರಾ ಆರಂಭವಾಗುತ್ತದೆ. ಮೈಸೂರು ದಸರಾ ಸಂಜೆ ಮುಕ್ತಾಯಗೊಂಡರೆ, ಮಡಿಕೇರಿ ದಸರಾ ಮೆರವಣಿಗೆ ಆರಂಭವಾಗುವುದೇ ರಾತ್ರಿ… ಮೈಸೂರು ದಸರಾದಂತೆ ಮಡಿಕೇರಿ ದಸರಾ ಕೂಡ ಜನರ ಕಣ್ಮನ ಸೆಳೆಯುತ್ತಿದ್ದು ದಶಮಂಟಪಗಳ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಜನರು ದೂರದ ಊರುಗಳಿಂದ ಆಗಮಿಸಿದ್ದಾರೆ.

ಬೆಳಕು ಸರಿದು ಕತ್ತಲಾವರಿಸುತ್ತಿದ್ದಂತೆ ಇಡೀ ನಗರದಲ್ಲಿ ವರ್ಣರಂಜಿತ ಮಾಯಲೋಕ ಅನಾವರಣವಾಗಿದೆ. ಮತ್ತೊಂದೆಡೆ ಗಾಂಧಿ ಮೈದಾನದಲ್ಲಿ ಕಲಾಸಂಭ್ರಮ ವೇದಿಕೆಯಲ್ಲಿ ಸಂಗೀತ ರಸಮಂಜರಿಯ ಕಾರ್ಯಕ್ರಮಗಳು ದಸರಾಗೆ ಮೆರಗು ನೀಡಿವೆ.

 

 

 

 

Tags:
error: Content is protected !!