Mysore
21
broken clouds

Social Media

ಭಾನುವಾರ, 22 ಫೆಬ್ರವರಿ 2026
Light
Dark

ಮಡಿಕೇರಿ: ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು

ಮಡಿಕೇರಿ: ತಾಲೂಕಿನ ಸಂಪಾಜೆ ಸಮೀಪದ ಕೊಯನಾಡುನಲ್ಲಿ ಬೈಕ್ ಅಪಘಾತ ದಿಂದ ಬೈಕ್ ಸವಾರ‌ ಮತ್ತು ಹಿಂಬದಿ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮೃತರು ಮೈಸೂರಿನ ಗಾಂಧಿನಗರ ನಿವಾಸಿಗಳಾಗಿದ್ದಾರೆ. ಈ ದುರ್ಘಟನೆಯು ಭಾನುವಾರ ತಡರಾತ್ರಿ ನಡೆದಿದ್ದು, ಇಂದು(ಆ.5) ಬೆಳಗ್ಗೆ ಸ್ಥಳೀಯರ ಗಮನಕ್ಕೆ ಬಂದಿದೆ.

ಮೃತರು ಮೈಸೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಮಡಿಕೇರಿಯ ಸಂಪಾಜೆ ಬಳಿ ಅಪಘಾತ ಸಂಭವಿಸಿದೆ. ಬೈಕ್ ಮತ್ತು ಇಬ್ಬರ ಮೃತ ದೇಹ ಚರಂಡಿಯಲ್ಲಿ ಪತ್ತೆಯಾಗಿದೆ. ರಾತ್ರಿ‌ ವೇಳೆ ವೇಗದಿಂದ ಬಂದ ಬೈಕ್ ರಸ್ತೆಯ ಡಿವೈಡರ್ ಗೆ ಗುದ್ದಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಪೋಲಿಸರು ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!