ಮಡಿಕೇರಿ: ಪ್ರೀತಿಸಿ ವಿವಾಹವಾಗಿದ್ದ ದಂಪತಿಯ ನಡುವೆ ಉಂಟಾದ ಕಲಹ ವಿಕೋಪಕ್ಕೆ ತೆರಳಿದ ಪರಿಣಾಮ ಪತ್ನಿ, ಚಾಕುವಿನಿಂದ ಇರಿದು ಪತಿಯನ್ನು ಕೊಲೆ ಮಾಡಿರುವ ಘಟನೆ ಭಾನುವಾರ ಮೂರ್ನಾಡುವಿನ ಗಾಂಧಿನಗರದಲ್ಲಿ ನಡೆದಿದೆ.
ಗಾಂಧಿನಗರದ ಬಾಡಿಗೆಗೆ ವಾಸವಾಗಿದ್ದ ಧರ್ಮ (26) ಕೊಲೆಯಾದವನು. ಪತ್ನಿ ಶ್ರೀಜಾ (24) ಹತ್ಯೆ ಮಾಡಿದವರು ಎಂದು ಹೇಳಲಾಗಿದೆ.
ದಂಪತಿ ಕಳೆದ 10 ತಿಂಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಭಾನುವಾರ ಬೆಳಿಗ್ಗೆ ದಂಪತಿ ನಡುವೆ ಜಗಳವಾಗಿದೆ. ಈ ವೇಳೆ ಪತ್ನಿ ಶ್ರೀಜಾ ತನ್ನ ಕೈಲಿದ್ದ ಚಾಕುವಿನಿಂದ ಆತನನ್ನು ತಿವಿದ ಪರಿಣಾಮ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಆರೋಪಿ ಶ್ರೀಜಾಳನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಧರ್ಮ ಕುಶಾಲನಗರದ ಮೂಲನವನಾಗಿದ್ದು, ಶ್ರೀಜ ಬೈರಂಬಾಡದ ನಿವಾಸಿಯಾಗಿದ್ದಾಳೆ. ಇಬ್ಬರು ಪ್ರೀತಿಸಿ ವಿವಾಹದ ನಂತರ ಮೂರ್ನಾಡಿನ ಗಾಂಧಿನಗರದಲ್ಲಿ ವಾಸವಾಗಿದ್ದರು.