ವಿರಾಜಪೇಟೆ : ಲಾರಿಗೂ (Lorry) ಓಮ್ನಿ ಕಾರು ನಡುವೆ ಭೀಕರ ಅಪಘಾತ (Accident) ಸಂಭವಿಸಿ ತಾಯಿ ಮಗ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹಾತೂರುವಿನಲ್ಲಿ ನಡೆದಿದೆ.
ಮೃತರನ್ನು ಬಿ.ಶೆಟ್ಟಿಗೇರಿ ಗ್ರಾಮದ ಲಲಿತ(58) ಸುದರ್ಶನ(42) ಎಂದು ಗುರುತಿಸಲಾಗಿದೆ.
ಬಿ.ಶೆಟ್ಟಿಗೇರಿಯಿಂದ ಗೋಣಿಕೊಪ್ಪಲಿಗೆ ತಾಯಿ ಲಲಿತ ಹಾಗೂ ಮಗ ಸುದರ್ಶನ ಮಾರುತಿ ಓಮ್ನಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ತರಕಾರಿ ಸಾಗಾಟ ಲಾರಿ ಹಾತೂರುವಿನಲ್ಲಿ ಕಾರಿಗೆ ಢಿಕ್ಕಿ ಹೊಡೆದಿದೆ.
ಇದನ್ನೂ ಓದಿ:- ನಂಜನಗೂಡು | ಆಸ್ತಿ ವಿಚಾರಕ್ಕೆ ಗಲಾಟೆ
ಢಿಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓಮ್ನಿ ಕಾರು ನಜ್ಜು ಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:- 200ಗ್ರಾಂ ಚಿನ್ನಾಭರಣ 1 ಲಕ್ಷ ನಗದು ಕಳ್ಳತನ; ಬೆಚ್ಚಿ ಬಿದ್ದ ಗ್ರಾಮಸ್ಥರು





