Mysore
20
overcast clouds
Light
Dark

ಕೊಡಗಿನಲ್ಲಿ ತಣ್ಣಗಾದ ಮಳೆ: ಇನ್ನೆರಡು ದಿನದಲ್ಲಿ ಜನಜೀವನ ಯಥಾಸ್ಥಿತಿ

ಕೊಡಗು: ಕಳೆದ ಒಂದು ವಾರದಿಂದ ಕೊಡಗಿನಲ್ಲಿ ಅವಾಂತರ ಸೃಷ್ಟಿಸಿದ್ದ ಮಳೆ ಈಗ ಶಾಂತನಾಗಿದ್ದು, ಇನ್ನೆರಡು ದಿನದಲ್ಲಿ ಜನಜೀವನ ಯಥಾಸ್ಥಿತಿಯಾಗಲಿದೆ.

ಕೊಡಗಿನಲ್ಲಿ ಮಳೆಯ ಆರ್ಭಟ ಸಂಪೂರ್ಣ ಕಡಿಮೆಯಾಗಿದ್ದು, ಪ್ರವಾಹ ಹೆಚ್ಚಾಗುವ ಆತಂಕ ಜನರಿಂದ ದೂರವಾಗಿದೆ. ನಿಧಾನಗತಿಯಲ್ಲಿ ಪ್ರವಾಹ ಇಳಿಮುಖವಾಗುತ್ತಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಇನ್ನೆರಡು ದಿನ ಮಳೆ ಸಂಪೂರ್ಣ ಕಡಿಮೆಯಾದರೆ ಜನಜೀವನ ಎಂದಿನಂತೆ ಇರಲಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹದ ನೀರು ತುಸು ಕಡಿಮೆಯಾಗಿದೆ.

ಮುಂದಿನ ನಾಲ್ಕು ದಿನಗಳಲ್ಲಿ ಮಳೆ ಕಳೆದ ವಾರ ಸುರಿದಷ್ಟು ತೀವ್ರವಾಗಿರುವುದಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಕೊಡಗು ಜಿಲ್ಲೆಯ ಜನರು ಕೊಂಚ ನಿರಾಳರಾಗಿದ್ದು, ಇಂದು ಪಟ್ಟಣಗಳತ್ತ ಅಗತ್ಯ ವಸ್ತುಗಳನ್ನು ತರಲು ತೆರಳುತ್ತಿದ್ದಾರೆ.

ಇನ್ನೂ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನತೆ ಇನ್ನೂ ಪ್ರವಾಹದ ಆತಂಕದಿಂದ ಹೊರಬಂದಿಲ್ಲ. ನದಿ ನೀರು ನಿಂತರೂ ಕೆಸರು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಮನೆಯ ಮುಂದೆ ತುಂಬಿರುವ ಕೆಸರನ್ನು ಜನತೆ ಸ್ವಚ್ಛ ಮಾಡುತ್ತಿದ್ದು, ಏನೂ ಕ್ಯಾರೆ ಎನ್ನದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.