ಮಡಿಕೇರಿ: ನಾಪತ್ತೆಯಾಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಶಾಲನಗರ ವ್ಯಾಪ್ತಿಯಲ್ಲಿ ನಡೆದಿದೆ.
ಕುಶಾಲನಗರದ ಆದಿಶಂಕರಾಚಾರ್ಯ ಬಡಾಬಣೆ ನಿವಾಸಿ ರಣಜಿತ್ ಸಿಂಗ್ ಅವರ ದ್ವಿತೀಯ ಪುತ್ರಿ ಭಾವನ ಮೃತಪಟ್ಟ ಯುವತಿ.
ಎಸ್ಸೆಸ್ಸೆಲ್ಸಿ ಮುಗಿಸಿ ಮನೆಯಲ್ಲಿದ್ದ ಭಾವನ (19) ಬಿಡುವಿನ ವೇಳೆಯಲ್ಲಿ ರಥಬೀದಿಯ ತಂದೆಯ ಫ್ಯಾನ್ಸಿ ಸ್ಟೋರ್ನಲ್ಲಿ ನೆರವಾಗುತ್ತಿದ್ದಳು. ಡಿ. 8 ರಂದು ಮೊಬೈಲ್ ವಿಚಾರವಾಗಿ ಭಾವನ ಹಾಗೂ ಆಕೆಯ ಸಹೋದರ ಮಹಿಪಾಲ್ ನಡುವೆ ಜಗಳವಾಗಿದೆ. ಈ ಸಂದರ್ಭ ಭಾವನ ಅಂಗಡಿಯಿಂದ ಹೊರತೆರಳಿದ್ದು ಇದುವರೆಗೆ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಇಂದು ಯುವತಿ ಮೃತದೇಹ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ದೊರೆತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಗೊಂಡಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.